ಅವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಕಾರಿಗಳು, ಸಿಬ್ಬಂದಿ ವಾಸ್ತವ್ಯ, ಸಾರಿಗೆ. ಚಾಲಕರಿಗೆ ಊಟದ ವ್ಯವಸ್ಥೆ ಜವಾಬ್ದಾರಿಯನ್ನು ಬೆಳಗಾವಿ ಜಿಲ್ಲಾಕಾರಿಯವರಿಗೆ ನೀಡಲಾಗಿದೆ. ಈ ಎಲ್ಲ ವ್ಯವಸ್ಥೆಗೆ 10ಕೋಟಿ ಖರ್ಚು ತಗಲುವ ಅಂದಾಜು ಮಾಡಲಾಗಿದ್ದು ಈಗಾಗಲೇ 3 ಕೋಟಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು(ನ.20): ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗುವ ಚಳಿಗಾಲದ 10 ದಿನಗಳ ಅವೇಶನಕ್ಕೆ ಬೆಳಗಾವಿಯ ಸುವರ್ಣಸೌಧ ಸಜ್ಜಾಗಿದೆ. ಅವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಜತೆಗೆ ಮಹದಾಯಿ, ಕೃಷ್ಣಾ ಮೊದಲಾದ ಜಲ ವಿವಾದಗಳೂ ಪ್ರಮುಖವಾಗಿ ಚರ್ಚಿಸಲ್ಪಡಲಿದ್ದು ಉತ್ತರ ಕರ್ನಾಟಕದ ವಿಚಾರಗಳಿಗೆ ಆದ್ಯತೆ ದೊರೆಯಲಿದೆ.

ಈಗಾಗಲೇ ವಿಧಾನಸೌಧದಿಂದ ಕಡತಗಳು, ಅವೇಶನದ ಕಾರ್ಯಕಲಾಪಕ್ಕೆ ಬೇಕಾಗುವ ಸಾಮಗ್ರಿಗಳು ಇಲಾಖಾವಾರು ಕಡತಗಳು ಬೆಳಗಾವಿಗೆ ರವಾನೆ ಆಗಿವೆ. ಒಂದು ವಾರದಿಂದ ಎಲ್ಲ ಕಡತಗಳ ಸಮೇತ ಅಕಾರಿಗಳು ಈಗಾಗಲೇ ಬೆಳಗಾವಿ ತಲುಪಿದ್ದಾರೆ.

ಅವೇಶನಕ್ಕೆ 19ಕೋಟಿ ವೆಚ್ಚ: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅವೇಶನಕ್ಕಾಗಿ ಸುಮಾರು 19 ಕೋಟಿ ವೆಚ್ಚ ತಗಲುವ ಅಂದಾಜು ಮಾಡಲಾಗಿದ್ದು, ಈಗಾಗಲೇ ಸರ್ಕಾರ 5 ಕೋಟಿಯನ್ನು ಡುಗಡೆ ಮಾಡಿದೆ. ಅವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಕಾರಿಗಳು, ಸಿಬ್ಬಂದಿ ವಾಸ್ತವ್ಯ, ಸಾರಿಗೆ. ಚಾಲಕರಿಗೆ ಊಟದ ವ್ಯವಸ್ಥೆ ಜವಾಬ್ದಾರಿಯನ್ನು ಬೆಳಗಾವಿ ಜಿಲ್ಲಾಕಾರಿಯವರಿಗೆ ನೀಡಲಾಗಿದೆ. ಈ ಎಲ್ಲ ವ್ಯವಸ್ಥೆಗೆ 10ಕೋಟಿ ಖರ್ಚು ತಗಲುವ ಅಂದಾಜು ಮಾಡಲಾಗಿದ್ದು ಈಗಾಗಲೇ 3 ಕೋಟಿ ಬಿಡುಗಡೆ ಮಾಡಲಾಗಿದೆ. ಸುವರ್ಣ ವಿಧಾನಸೌಧ ಸುತ್ತಮುತ್ತ, ಬೆಳಗಾವಿ ನಗರದಲ್ಲಿ ಭದ್ರತೆ ಮತ್ತು ಸುರಕ್ಷತಾ ಏರ್ಪಾಡುಗಳನ್ನು ಬೆಳಗಾವಿ ಪೊಲೀಸ್ ಆಯುಕ್ತರಿಗೆ ನೀಡಲಾಗಿದ್ದು ಒಟ್ಟು 1.5ಕೋಟಿ ಅಂದಾಜು ವೆಚ್ಚಕ್ಕಾಗಿ 1ಕೋಟಿ ಬಿಡುಗಡೆ ಮಾಡಲಾಗಿದೆ. ಈ ಮೊತ್ತದಲ್ಲಿ ಪೊಲೀಸರು, ಪೊಲೀಸ್ ಅಕಾರಿಗಳ ಊಟ ವಸತಿ ವೆಚ್ಚವೂ ಸೇರಿದೆ. ಲೋಕೋಪಯೋಗಿ ಇಲಾಖೆಯ ಬೆಳಗಾವಿ ಕಾರ್ಯಕಾರಿ ಅಭಿಯಂತರರಿಗೆ ಸಿವಿಲ್ ಮತ್ತು ಎಲೆಕ್ಟ್ರಿಕ್ ಕಾಮಗಾರಿ ವಹಿಸಲಾಗಿದ್ದು 7.27ಕೋಟಿ ಮೊತ್ತದಲ್ಲಿ ಅಗತ್ಯ ಸಿದ್ಧತೆ ಮಾಡಿದ್ದಾರೆ.

ತನ್ವೀರ್ ಸೇಠ್ ಪ್ರಕರಣ ಪ್ರತಿಧ್ವನಿ

ಸದನದಲ್ಲಿ ಈ ಬಾರಿ ಮೊದಲ ದಿನವೇ ಶಿಕ್ಷಣ ಸಚಿವ ತನ್ವೀರ್‌ಸೇಠ್ ಟಿಪ್ಪು ಜಯಂತಿ ಸಮರಂಭದಲ್ಲಿ ವಾಟ್ಸ್ಯಾಪ್‌ನಲ್ಲಿ ಬಂದಿದ್ದ ಅಶ್ಲೀಲ ಚಿತ್ರವನ್ನು ವೀಕ್ಷಿಸಿದ ಪ್ರಕರಣ ಪ್ರಸ್ತಾಪಿಸಲು ಬಿಜೆಪಿ ತುದಿಗಾಲಲ್ಲಿದೆ. ಬಿಜೆಪಿ ಈ ವಿಚಾರದಲ್ಲಿ ತನ್ವೀರ್ ರಾಜಿನಾಮೆಗೆ ಪಟ್ಟು ಹಿಡಿಯಲಿದ್ದು ರಾಜಿನಾಮೆ ಪ್ರಶ್ನೆಯೇ ಇಲ್ಲ. ತನಿಖಾ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಈ ವಿಚಾರ ಪ್ರಮುಖ ಅಸವಾಗಿದ್ದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಆದರೆ ಈ ವಿಚಾರದಿಂದ ಸದನದ ಕಲಾಪಗಳಿಗೆ ಅಡ್ಡಿ ಆಗುವುದಾದಲ್ಲಿ ತಮ್ಮ ಬೆಂಬಲವಿಲ್ಲ. ಉತ್ತರಕರ್ನಾಟಕದ ಸಾಕಷ್ಟು ವಿಚಾರಗಳು ಚರ್ಚೆ ಆಗಬೇಕಿದ್ದು ಸದನ ಕಲಾಪಗಳು ಸುಸೂತ್ರವಾಗಿ ನಡೆಯಬೇಕಿದ್ದು ಈ ನಿಟ್ಟಿನಲ್ಲಿ ತನ್ವೀರ್ ಸೇಠ್ ಪ್ರಕರಣಕ್ಕೆ ಆದ್ಯತೆ ನೀಡುವುದಿಲ್ಲವೆಂದು ಜೆಡಿಎಸ್ ಮುಖಂಡರು‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚು?

ಸಚಿವರು, ಶಾಸಕರು, ಅಕಾರಿಗಳು, ಸಿಬ್ಬಂದಿ ವಾಸ್ತವ್ಯ, ಸಾರಿಗೆ. ಚಾಲಕರಿಗೆ ಊಟದ ವ್ಯವಸ್ಥೆ 10ಕೋಟಿ

ಸುವರ್ಣ ವಿಧಾನಸೌಧ ಸುತ್ತಮುತ್ತ, ಬೆಳಗಾವಿ ನಗರದಲ್ಲಿ ಭದ್ರತೆ ಮತ್ತು ಸುರಕ್ಷತಾ ಏರ್ಪಾಡು- 1.5ಕೋಟಿ

(ಪೊಲೀಸರು, ಪೊಲೀಸ್ ಅಕಾರಿಗಳ ಊಟ ವಸತಿ ಸೇರಿ)

ಸಿವಿಲ್ ಮತ್ತು ಎಲೆಕ್ಟ್ರಿಕ್ ಕಾಮಗಾರಿ 7.27ಕೋಟಿ

ಒಟ್ಟು ಮೊತ್ತ(ಅಂದಾಜು) 18.77ಕೋಟಿ

ಈಗ ಮುಂಗಡ ಬಿಡುಗಡೆ ಮಾಡಿರುವ ಮೊತ್ತ 5ಕೋಟಿ

ಮಹದಾಯಿ ವಿಷಯಕ್ಕೆ 2 ದಿನ ಬೇಕು: ಎಚ್‌ಡಿಕೆ

ಬಾಗಲಕೋಟೆ/ಮುದ್ದೇಬಿಹಾಳ: ಬೆಳಗಾವಿ ಅವೇಶನದಲ್ಲಿ ಮಹದಾಯಿ ವಿಷಯ ಚರ್ಚಿಸಲು ಎರಡು ದಿನ ಮೀಸಲಿಡಬೇಕು. ಈ ಕುರಿತು ಎಲ್ಲ ಶಾಸಕರಲ್ಲಿ ಸಹಮತವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮುದ್ದೇಬಿಹಾಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಅವೇಶನದಲ್ಲಿ ಅವಕಾಶ ಸಿಗಬೇಕು. ರೈತರಿಗೆ ಬರದಿಂದಾಗಿ ತುಂಬಾ ತೊಂದರೆಯಾಗಿದೆ. ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ಈ ಸಂಬಂಧ ಅವೇಶನದಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಇತ್ತೀಚೆಗೆ ಸದನದ ಕಲಾಪಗಳು ವೃಥಾ ಚರ್ಚೆಯಲ್ಲಿ ಮುಗಿಯುತ್ತಿದ್ದು, ಸದನದ ಸಮಯ ಹಾಳಾಗಬಾರದು. ಬಿಜೆಪಿಯವರು ಸಚಿವ ತನ್ವೀರ್ ಸೇಠ್ ಪ್ರಕರಣದ ಬಗ್ಗೆ ವೃಥಾ ಚರ್ಚಿಸದೆ ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಸಹಕರಿಸಬೇಕು. ನಾನು ಮುಂದಿನ ಒಂದೂವರೆ ವರ್ಷ ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ ಎಂದರು.