ಬೆಂಗಳೂರು(ಸೆ.28): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.

ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ನಿಮ್ಮ ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

ಇದೇನು ತಮಾಷೆಯಲ್ಲ ಸುವರ್ಣನ್ಯೂಸ್, ಅಂದ್ರು ಎಲ್ ಸಾಲ್ವಡಾರ್ ಪ್ರಧಾನಿ!

ಎಲ್ ಸಾಲ್ವಡಾರ್‌ ದೇಶದಲ್ಲೂ ಸದ್ದು ಮಾಡಿದ ಸುವರ್ಣ ನ್ಯೂಸ್ ಡಾಟ್ ಕಾಂ. ಹೌದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಲ್‌ ಸಾಲ್ವಡಾರ್‌ ಅಧ್ಯಕ್ಷ ನಯೀಬ್‌ ಬುಕೆಲೆ ತಮ್ಮ ಚೊಚ್ಚಲ ಬಾರಿಗೆ ಭಾಷಣಕ್ಕೂ ಮೊದಲು ತೆಗೆದುಕೊಂಡ ಸೆಲ್ಫೀ ಭಾರೀ ವೈರಲ್ ಈ ಸುದ್ದಿಯನ್ನು ಸುವರ್ಣ ನ್ಯೂಸ್ ಡಾಟ್ ಕಾಂ ಕೂಡಾ ಪ್ರಕಟಿಸಿತ್ತು. ಈ ಸುದ್ದಿಯನ್ನು ಅಧ್ಯಕ್ಷ ನಯೀಬ್‌ ಬುಕೆಲೆ ತಮ್ಮ ಟ್ವಿಟರ್ ಖಾತೆಯಲ್ಲಿ 'ಇದೇನು ತಮಾಷೆ ಅಲ್ಲ' ಎಂದು ಶೇರ್ ಮಾಡಿಕೊಂಡಿದ್ದಾರೆ.

ಮಹಿಷಾ ದಸರಾ ರದ್ದು: ಮೋದಿ, ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಭಗವಾನ್

ಮಹಿಷಾಸುರನನ್ನ ಸುಮ್ಮನೆ ರಾಕ್ಷಸ ಅಂತ ಬಿಂಬಿಸಿದ್ದಾರೆ. ಆತ ರಾಕ್ಷಸನಾಗಿದ್ದರೆ ಆತನ ಹೆಸರನ್ನ ಒಂದು ರಾಜ್ಯಕ್ಕೆ ಇಡುತ್ತಿದ್ದರಾ.? ಜನರಿಗೆ ಇಡುತ್ತಿದ್ದರಾ.? ಎಂದು ಸಾಹಿತಿ ಪ್ರೋ.ಕೆ.ಎಸ್.ಭಗವಾನ್ ಪ್ರಶ್ನಿಸಿದ್ದಾರೆ. ಇಂದು (ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಗವಾನ್, ನಿನ್ನೆ (ಶುಕ್ರವಾರ) ಪ್ರಧಾನಿಗಳು ವಿಶ್ವಸಂಸ್ಥೆ ಯಲ್ಲಿ ನಾನು ಬುದ್ದನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಿದ್ದಾರೆ. ಬುದ್ದಬೇಕು ಯುದ್ದ ಬೇಡ ಅಂತ ಹೇಳಿದ್ದಾರೆ. ಅವರು ಏಕೆ ರಾಮನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಿಲ್ಲ. ರಾಮನ ಬಗ್ಗೆ ವಿಶ್ವಸಂಸ್ಥೆಯಲ್ಲಿ ಏಕೆ ಮೋದಿ ಮಾತನಾಡಿಲ್ಲ ಎಂದು ಪ್ರೋ.ಕೆ.ಎಸ್.ಭಗವಾನ್ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿದರು.

ಗಾನಕೋಗಿಲೆ ಲತಾ ಮಂಗೇಶ್ಕರ್ ಗೆ 90 ರ ಸಂಭ್ರಮ

ಸಂಗೀತ ಲೋಕದ ದಂತಕಥೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ಇಂದಿಗೆ ಭರ್ಜರಿ 90 ವರ್ಷ ತುಂಬಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಗಾನಕೋಗಿಲೆ. ಸುಮಧುರವಾದ ಕಂಠದ ಮೂಲಕ ಮೋಡಿ ಮಾಡಿದ ಲತಾ ಎಲ್ಲಾ ಭಾಷೆಗಳಲ್ಲೂ ಸೇರಿ ಬರೋಬ್ಬರಿ 36 ಸಾವಿರ ಹಾಡುಗಳನ್ನು ಹೇಳಿದ್ದಾರೆ. 3 ನ್ಯಾಷನಲ್ ಅವಾರ್ಡ್, 6 ಫಿಲ್ಮ್ ಫೇರ್ ಅವಾರ್ಡನ್ನು ಗೆದ್ದಿದ್ದಾರೆ. 2001 ರಲ್ಲಿ ಅತ್ಯುನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೂ ಭಾಜನರಾಗಿದ್ದಾರೆ.

ಅಸಲಿ ಹೀರೋ: ಟ್ರಾಫಿಕ್ ಕ್ಲಿಯರ್ ಮಾಡಲು ಹಾರೆ ಹಿಡಿದ ಪೊಲೀಸ್ ದೇಶದಾದ್ಯಂತ ಫೇಮಸ್!

ಬೆಂಗಳೂರು(ಸೆ.28): ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡುತ್ತಿದೆ. ರಸ್ತೆಯಲ್ಲಿ ನಿಂತಿದ್ದ ನೀರನ್ನು ಟ್ರಾಫಿಕ್ ಪೊಲೀಸ್ ತಾನೇ ಖುದ್ದು ಹಾರೆ ಮೂಲಕ ತೆರವುಗೊಳಿಸುತ್ತಿರುವ ವಿಡಿಯೋ ಇದಾಗಿದೆ.

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಚೀನಾಗೆ ಭಾರತದ ಎದಿರೇಟು!

ವಿಶ್ವಸಂಸ್ಥೆ(ಸೆ.28): ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತನ್ನ ಭಾಷಣದಲ್ಲಿ ಚೀನಾ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ವಿಷಯ ಪ್ರಸ್ತಾಪಿಸಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕಪಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ವಿಷಯ ಪ್ರಸ್ತಾಪಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ.

'ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ'

ಮುಂಬೈ(ಸೆ.28): ಭಾರತದ ಆರ್ಥಿಕತೆ ದಿನೇ ದಿನೇ ಕುಸಿಯುತ್ತಿದ್ದು, ಅನೇಕ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಭಾರತದ ಆರ್ಥಕತೆ ಕುಸಿಯಲು ಮೊಘಲರು ಹಾಗೂ ಬ್ರಿಟಿಷರೇ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೂರಿದ್ದಾರೆ. ಭಾರತ ವಿಶ್ವದಲ್ಲೇ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. ಅತ್ಯಂತ ಬಲಿಷ್ಟ ಆರ್ಥಿಕತೆ ಹೊಂದಿತ್ತು. ಆದರೆ ಮೊಘಲರ ಆಗಮನ ಹಾಗೂ ಬ್ರಿಟಿಷರ ನಿರ್ಗಮನದ ಬಳಿಕ ಭಾರತದ ಆರ್ಥಿಕತೆ ಮೇಲೆ ಕಪ್ಪು ನೆರಳು ಬಿತ್ತು ಎಂದಿದ್ದಾರೆ.

ಇದು ಸೃಷ್ಟಿಯ ವೈಚಿತ್ರ್ಯ: ಇಲ್ಲಿದೆ ಸೂರ್ಯನಷ್ಟೇ ದೊಡ್ಡ ಗ್ರಹದ ಚಿತ್ರ!

ವಾಷಿಂಗ್ಟನ್(ಸೆ.28): ಖಗೋಳ ವಿಜ್ಞಾನಿಗಳು ಭೂಮಿಯಿಂದ ಸುಮಾರು 31 ಜ್ಯೋತಿವರ್ಷ ದೂರ ಇರುವ ಪುಟ್ಟ ಹಾಗೂ ಅಷ್ಟೇ ಅಚ್ಚರಿಯ ಜಗತ್ತೊಂದನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸೂರ್ಯನಿಗಿಂತ ಕೇವಲ ಶೇ.12ರಷ್ಟು ದ್ರವ್ಯರಾಶಿ ಹೊಂದಿರುವ ನಕ್ಷತ್ರವೊಂದನ್ನು ಅದರಷ್ಟೇ ಗಾತ್ರದ ಗ್ರಹವೊಂದು ಸುತ್ತುತ್ತಿರುವ ವಿಚಿತ್ರ ವಿದ್ಯಮಾನವನ್ನು ದಾಖಲಿಸಲಾಗಿದೆ.

ಎಲ್ಲರಂತಲ್ಲ ಎಡಚರು, ಇವರು ಭಲೇ ಚತುರರು!

ಈ ಜಗತ್ತಿನ ಜನರಲ್ಲಿ ಶೇ.10ರಿಂದ 12ರಷ್ಟು ಮಂದಿ ಎಡಗೈ ಪ್ರಮುಖವಾಗಿ ಬಳಸುವವರಿದ್ದಾರೆ. ಆದರೆ ನಾವು ಬಲಗೈ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಬಹುತೇಕ ಗ್ಯಾಜೆಟ್‌ಗಳು, ಆಫೀಸ್ ಸಪ್ಲೈಗಳು, ಅಡುಗೆಮನೆ ಪರಿಕರಗಳು, ಹಾಗೂ ಇತರೆ ವಸ್ತುಗಳನ್ನು ಬಲಗೈ ಪ್ರಮುಖವಾಗಿ ಬಳಸುವವರನ್ನು ಗಮನದಲ್ಲಿಟ್ಟುಕೊಂಡೇ ತಯಾರಿಸಲಾಗುತ್ತದೆ. ಬಹುತೇಕ ಜನರು ಲೆಫ್ಟೀ ಕ್ಲಬ್‌ನವರಲ್ಲದ ಕಾರಣ, ಈ ಎಡಚರ ಕುರಿತ ಕೆಲ ಆಸಕ್ತಿಕರ ವಿಷಯಗಳನ್ನಿಲ್ಲಿ ಕೊಡಲಾಗಿದೆ.

ಸೋಶಿಯಲ್ ಮೀಡಿಯಾ ಬ್ಯೂಟಿ ದಿಶಾ ಮದನ್ ' bubba.vee 'ಪೋಟೋಗಳಿವು!

ವಾವ್! ಎಷ್ಟು ಚಂದ ಈಕೆ. ಟಿಕ್‌ಟಾಕ್ ಒಮ್ಮೆ ನೋಡಿದರೆ ನೋಡುತ್ತಲೇ ಇರಬೇಕು ಎನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಸಮಯದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲಾರಿಟಿ ಪಡೆದ ನಟಿ ಕಮ್ ಡ್ಯಾನ್ಸರ್ ದಿಶಾ ಮದನ್ ಕೆಲ ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗ ವಿಹಾನ್ ಗೆ 2 ತಿಂಗಳು ತುಂಬಿದ್ದು ಫೋಟೋಶೂಟ್ ಮಾಡಿಸಿದ್ದಾರೆ. ವಿಹಾನ್ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು 16 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. ಎಲ್ಲಾ ಫೋಟೋಗಳ್ನು Mommy Shots by amrita ಸೆರೆ ಹಿಡಿದಿದ್ದಾರೆ.

ಕುಸ್ತಿ: ದೀಪಕ್‌ಗೆ ವಿಶ್ವ ನಂ.1 ಪಟ್ಟ


ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಭಾರತದ ಯುವ ಕುಸ್ತಿಪಟು ದೀಪಕ್ ಪೂನಿಯಾ, ಶುಕ್ರವಾರ ಬಿಡುಗಡೆಯಾದ ನೂತನ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.