ಕುಸ್ತಿ: ದೀಪಕ್‌ಗೆ ವಿಶ್ವ ನಂ.1 ಪಟ್ಟ
ಪುರುಷರ 89 ಕೆ.ಜಿ ವಿಭಾಗದ ಫೈನಲ್‌ಗೇರಿದ್ದ ದೀಪಕ್, ಗಾಯದ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದು ಬೆಳ್ಳಿ ಪದಕ ಪಡೆದಿದ್ದರು. ವಿಜೇತ ದೀಪಕ್ ಪೂನಿಯಾ ವಿಶ್ವ ನಂ.1 ಆಗಿ ಹೊರಹೊಮ್ಮಿದ್ದಾರೆ.
ನವದೆಹಲಿ(ಸೆ.28): ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಭಾರತದ ಯುವ ಕುಸ್ತಿಪಟು ದೀಪಕ್ ಪೂನಿಯಾ, ಶುಕ್ರವಾರ ಬಿಡುಗಡೆಯಾದ ನೂತನ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಬಿಜೆಪಿಗೆ ಆನೆ ಬಲ; ಚುನಾವಣಾ ಅಖಾಡಕ್ಕೆ ಕುಸ್ತಿ ಪಟು ಯೋಗೇಶ್ವರ್ ದತ್?
ಪುರುಷರ 89 ಕೆ.ಜಿ ವಿಭಾಗದ ಫೈನಲ್‌ಗೇರಿದ್ದ ದೀಪಕ್, ಗಾಯದ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದು ಬೆಳ್ಳಿ ಪದಕ ಪಡೆದಿದ್ದರು. ವಿಜೇತ ದೀಪಕ್ ಪೂನಿಯಾ ವಿಶ್ವ ನಂ.1 ಆಗಿ ಹೊರಹೊಮ್ಮಿ ದ್ದಾರೆ. ನೂತನ ರ‍್ಯಾಂಕಿಂಗ್‌ನಲ್ಲಿ 65 ಕೆ.ಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ ನಂ.1 ಸ್ಥಾನದಿಂದ ಕುಸಿದಿದ್ದು, 2ನೇ ಸ್ಥಾನಕ್ಕೆ ತಲುಪಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019: ಬೆಳ್ಳಿಗೆ ತೃಪ್ತಿಪಟ್ಟ ದೀಪಕ್
86 ಕೆ.ಜಿ ಫೈನಲ್‌ನಲ್ಲಿ ದೀಪಕ್ ಪೂನಿಯಾ ಇರಾನ್ ನ ಹಸನ್ ಯಾಜ್ದಾನಿ ಎದುರಿಸಬೇಕಿತ್ತು. ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ದೀಪಕ್ ಫೈನಲ್ ಸ್ಪರ್ಧಿಸಲಿಲ್ಲ. ಇದರಿಂದ ದೀಪಕ್ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಯಾಜ್ದಾನಿಗಿಂತ 4 ಅಂಕ ಹೆಚ್ಚು ಸಂಪಾದಿಸಿದ ದೀಪಕ್ (82 ಅಂಕ) ನಂ.1 ಆಗಿದ್ದಾರೆ. ಕಂಚಿನ ಪದಕಕ್ಕೆ ತೃಪ್ತಿಪಟ್ಟ ಭಜರಂಗ್ ಪೂನಿಯಾ 2ನೇ ಸ್ಥಾನಕ್ಕೆ ಕುಸಿದರು. ಭಜರಂಗ್ 63 ಅಂಕ ಸಂಪಾದಿಸಿದ್ದರೂ 65 ಕೆ.ಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ನೂರ್ ಸುಲ್ತಾನ್ ಅಗ್ರಸ್ಥಾನಕ್ಕೇರಿದ್ದಾರೆ.
57 ಕೆ.ಜಿಯಲ್ಲಿ ಕಂಚಿನ ಪದಕ ಗೆದ್ದ ರವಿ ದಹಿಯಾ 5ನೇ ಸ್ಥಾನದಲ್ಲಿದ್ದರೆ, ಕಂಚಿಗೆ ತೃಪ್ತಿಪಟ್ಟಿದ್ದ ರಾಹುಲ್ ಅವಾರೆ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಫೋಗಾಟ್ 2ನೇ ಸ್ಥಾನಕ್ಕೇರಿದರು. 50 ಕೆ.ಜಿಯಲ್ಲಿ ಸೀಮಾ ಬಿಸ್ಲಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. 59 ಕೆ.ಜಿಯಲ್ಲಿ ಮಂಜು ಕುಮಾರಿ 3, ಪೂಜಾ ದಂಡಾ 5ನೇ ಸ್ಥಾನ ಪಡೆದರು.