ಕರ್ನಾಟಕದವರೇ ಆದ ಮಧ್ಯಪ್ರದೇಶದ ಅಮರಕಂಟಕ ಎಂಬಲ್ಲಿನ ಇಂದಿರಾಗಾಂಧಿ ಬುಡಕಟ್ಟು ವಿವಿ ಕುಲಪತಿ, ಧಾರವಾಡದ ಡಾ.ತೇಜಸ್ವಿ ಕಟ್ಟಿಮನಿ ಅವರು ಹಿಂದಿ ಭಾಷೆಯ ವಿಭಾಗದಿಂದ ಆಯ್ಕೆಯಾಗಿದ್ದಾರೆ.

ಬೆಳಗಾವಿ(ಜ.05): ಬೆಳಗಾವಿಯ ಅಥಣಿಯ ಸೃಜನಶೀಲ ಲೇಖಕ ಬಾಳಾಸಾಹೇಬ ಲೋಕಾಪುರ ಅವರು ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಗೆ ನಾಲ್ವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಕನ್ನಡ ಭಾಷಾ ವಿಭಾಗದಿಂದ ದಲಿತ ಕವಿ ಸಿದ್ಧಲಿಂಗಯ್ಯ, ಸರಜೂ ಕಾಟ್ಕರ್ ಮತ್ತು ಪ್ರೊ.ಬಾಳಾಸಾಹೇಬ ಲೊಕಾಪುರ ಸೇರಿ ಮೂವರು ಆಯ್ಕೆಯಾಗಿದ್ದರೆ. ಕರ್ನಾಟಕದವರೇ ಆದ ಮಧ್ಯಪ್ರದೇಶದ ಅಮರಕಂಟಕ ಎಂಬಲ್ಲಿನ ಇಂದಿರಾಗಾಂಧಿ ಬುಡಕಟ್ಟು ವಿವಿ ಕುಲಪತಿ, ಧಾರವಾಡದ ಡಾ.ತೇಜಸ್ವಿ ಕಟ್ಟಿಮನಿ ಅವರು ಹಿಂದಿ ಭಾಷೆಯ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ನಾಲ್ವರು ಸಾಹಿತಿಗಳು ರಾಜ್ಯವನ್ನು ಪ್ರತಿನಿದಿಸಿದಂತಾಗಿದೆ.