ಕೆಆರ್​​ಎಸ್`ಗೆ ಹಾರಿ ನಾಲ್ವರು ರೈತರಿಂದ ಆತ್ಮಹತ್ಯೆಗೆ ಯತ್ನ,ಮೂವರ ರಕ್ಷಣೆ, ಮತ್ತೊಬ್ಬನಿಗಾಗಿ ಶೋಧ

ಮಂಡ್ಯ(ಸೆ.09): ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನ ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದೆ. ಕೆಆರ್​ಎಸ್ ಡ್ಯಾಂ ಬಳಿ ರೈತರ ಪ್ರತಿಭಟನೆ ತೀವ್ರಗೊಂಡಿದೆ.

ಕೆಆರ್​​ಎಸ್`ಗೆ ಹಾರಿ ನಾಲ್ವರು ರೈತರು ಆತ್ಮಹತ್ಯೆಗೆ ಯತ್ನಿಸಿದ್ಧಾರೆ. ನದಿಗೆ ಹಾರಿದ ಮೂವರು ರೈತರನ್ನು ಪೊಲೀಸರು ರಕ್ಷಿಸಿದ್ದಾರೆ. ಮತ್ತೊಬ್ಬ ರೈತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅಸ್ವಸ್ಥಗೊಂಡ ಮೂವರು ರೈತರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಮತ್ತೊಬ್ಬ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ರೈತನಿಂದ ವಿಷದ ಬಾಟಲ್ ಕಿತ್ತುಕೊಂಡ ಪೊಲೀಸರು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.