ನವದೆಹಲಿ(ಆ.06): ಬಿಜೆಪಿ ಪ್ರಭಾವಿ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್(67) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಫತ್ರೆಯಲ್ಲಿ ಸುಷ್ಮಾ ಕೊನೆಯುಸಿರೆಳಿದಿದ್ದಾರೆ.  ಸುಷ್ಮಾ ಸ್ವರಾಜ್ ಹಾಗೂ ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಸುಷ್ಮಾ ಅವರ ಕನ್ನಡ ಭಾಷಣ ಯಾವ ಕನ್ನಡಿಗನೂ ಮರೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ

1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ  ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಷ್ಮಾ, ಭರ್ಜರಿ ಪ್ರಚಾರ ನಡೆಸಿದ್ದರು.  ಸುಷ್ಮಾ ಸ್ವರಾಜ್, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಬಳ್ಳಾರಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸುಷ್ಮಾ ಸ್ವರಾಜ್, ನಿರರ್ಗಗಳವಾಗಿ ಕನ್ನಡದಲ್ಲಿ ಮಾತನಾಡಿದ್ದರು. 

ಇದನ್ನೂ ಓದಿ: ಈ ದಿನಕ್ಕಾಗಿ ಕಾಯುತ್ತಿದ್ದೆ; ಸುಷ್ಮಾ ಧನ್ಯವಾದದ ಕೊನೆಯ ಟ್ವೀಟ್!

ಬಳ್ಳಾರಿ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಿದಾಗ ಸುಷ್ಮಾ ಸ್ವರಾಜ್ ಕನ್ನಡ ಕಲಿತು ಮಾತನಾಡಿದ್ದರು ಅನ್ನೋದು ವಿಶೇಷ. ಬಳ್ಳಾರಿ ಜನತೆಯ ಆಶೋತ್ತರಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸುಷ್ಮಾ ಕನ್ನಡ ಕಲಿತಿದ್ದರು. ಈ ಮೂಲಕ ತಾನು ಇತರ ರಾಜಕಾರಣಿಗಳಿಗಿಂತ ಭಿನ್ನ ಎಂದು 1999ರಲ್ಲೇ ಸಾಬೀತು ಮಾಡಿದ್ದರು. ಸುಷ್ಮಾ ಸ್ವರಾಜ್ ಕನ್ನಡ ಭಾಷಣವನ್ನು, ನೂತನ ಶಾಸಕ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ಮತ್ತೆ ನೆನಪಿಸಿದ್ದಾರೆ.