‘ನೀಚ-ನಾಲಾಯಕ್ ಸಚಿವ ಅನಂತಕುಮಾರ್ ಹೆಗಡೆ’

Former Minister Anand Asnotikar VS Union Minister Anant Kumar Hegde
Highlights

ಇದೀಗ ಮಾಜಿ ಸಚಿವ ಆನಂದ್ ಆಸ್ನೋಟಿರ್ ನಾಲಗೆ ಹರಿಯಬಿಟ್ಟಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿರುವ ಆನಂದ್ ಆಸ್ನೋಟಿಕರ್ ಏನೇನು ಹೇಳಿದ್ರು..

 

ಕಾರವಾರ[ಜೂ.30]  ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮೇಲೆ ವಾಗ್ದಾಳಿ ಮಾಡಿದ್ದಾರೆ. ಬ್ರಾಹ್ಮಣ ಸಮಾಜದಲ್ಲಿ ಜನಸಿ ಸಂಸ್ಕಾರವಿಲ್ಲದಂತೆ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೇಶ ಕಂಡ ಅತಿ ನೀಚ ಹಾಗೂ ನಾಲಾಯಕ್ ಸಚಿವ ಅನಂತಕುಮಾರ್ ಹೆಗಡೆ. ಇಂತ ನಾಲಾಯಕ್ ಸಂಸದರನ್ನು ಕಾಣಲು ಸಾಧ್ಯವೇ ಇಲ್ಲ. ಹುಬ್ಬಳ್ಳಿಯಲ್ಲಿ ಬೇರೆ ಯಾರೋ ಹಾರಿಸಿದ ಧ್ವಜಕ್ಕೆ ತಾನು ಹಾರಿಸಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಂಡವ ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.

ಅನಂತ್ ಕುಮಾರ್ ಹೆಗಡೆಗೆ ಅನಂತ್ ಕುಮಾರ್ ಟಾಂಗ್

ಶಾಸಕ ಕಾಗೇರಿಯ ಮೇಲೆ ಚಪ್ಪಲಿಯಿಂದ ಹಲ್ಲೆ ಇದೇ ಅನಂತಕುಮಾರ್ ಹಲ್ಲೆ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಆಗಾಗ ವಿವಾದಿತ ಹೇಳಿಕೆ ನೀಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮದೇ ಪಕ್ಷದವರಿಂದಲೂ ಟೀಕೆಗೆ ಒಳಗಾಗಿದ್ದರು.

loader