ಅನಂತ್ ಕುಮಾರ್ ಹೆಗಡೆಗೆ ಅನಂತ್ ಕುಮಾರ್ ಟಾಂಗ್

Ananth Kumar Slams Ananth Kumar Hegde
Highlights

ರಾಜ್ಯದ ಕೆಲ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇದು ಸರಿಯಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಅವರು ಮತ್ತೊಬ್ಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಬೆಂಗಳೂರು: ರಾಜ್ಯದ ಕೆಲ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇದು ಸರಿಯಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಅವರು ಮತ್ತೊಬ್ಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯಕಾರಿಣಿ ಸಭೆಯ ಸಮಾರೋಪ ಭಾಷಣದಲ್ಲಿ ಅನಂತಕುಮಾರ್ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ
ಅವರಿಗೆ ಚಾಟಿ ಬೀಸಿದ್ದಾರೆ ಎಂದು ತಿಳಿದು ಬಂದಿದೆ. 

ರಾಜ್ಯದ ಕೆಲ ನಾಯಕರು ಬಾಯಿಗೆ  ಬಂದಂತೆ ಮಾತನಾಡುವುದನ್ನು ಬಿಡಬೇಕು. ಹಳ್ಳಿ ಕಡೆ ದನಗಳು ಮೇಯಲು ಹೋಗುತ್ತವೆ. ಕೆಲವು ಸರಿಯಾದ ದಾರಿಯಲ್ಲೆ ಸಾಗಿದರೆ, ಮತ್ತೆ ಕೆಲವು ದನಗಳು ಅಡ್ಡಾ ದಿಡ್ಡಿ ಮಾರ್ಗ ಅನುಸರಿಸುತ್ತವೆ.

ದೇ ರೀತಿ ಪಕ್ಷದಲ್ಲೂ ಇತಿಮಿತಿ ಮೀರಿ ಬಾಯಿಗೆ ಬಂದಂತೆ ಪ್ರತಿಯಿಕ್ರಿಸುತ್ತಾರೆ ಎಂದು ಯಾರ ಹೆಸರು ಪ್ರಸ್ತಾಪಿಸದೆ ಖಾರ ವಾಗಿ ಹೇಳಿದ್ದಾರೆ. ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಲ್ಲಿಯೊ ಮಾತನಾಡಿ ದ್ದಕ್ಕೆ ನಾವು ಪ್ರತಿ ಕ್ರಿಯೆ ನೀಡಿದರೆ ಹೇಗಿರುತ್ತದೊ, ಅಷ್ಟೇ ಇವರ ಮಾತು ಅಪ್ರಸ್ತುತ ಎಂದರು.

ಲೋಕಸಭೆಯಲ್ಲಿ ಬಿಜೆಪಿಗೆ 300 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಅವಕಾಶ ಇದೆ. ಪಕ್ಷದ ನಿಲುವು, ಮಿತಿ ಮೀರಿ ಮಾತನಾಡು ವುದನ್ನು ನಾಯಕರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದಿದ್ದಾರೆ. 

loader