ನವದೆಹಲಿ (ಸೆ. 20): ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಬೇಕಿರುವ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಹಿನ್ನಡೆಯಾಗಿದೆ. ಪ್ರದೇಶ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿದ್ದ, ಮಾಜಿ ಐಪಿಎಸ್‌ ಅಧಿಕಾರಿ, ಮಾಜಿ ಸಂಸದ ದಕ್ಷಿಣ ಕನ್ನಡ ಮೂಲದ ಅಜಯ್‌ ಕುಮಾರ್‌ ಅವರು ಹಠಾತ್ತನೇ ಗುರುವಾರ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

‘ಯೋಗಿ ಸಿಎಂ’ ಹಿಂದಿನ ಸೀಕ್ರೆಟ್‌ ಬಹಿರಂಗ!

ಪಕ್ಷದ ಹಿತವನ್ನು ಕಡೆಗಣಿಸಿ ಹಿರಿಯ ನಾಯಕರು ತಮ್ಮ ಸ್ವಹಿತಾಸಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿ ಕಳೆದ ತಿಂಗಳಷ್ಟೇ ಜಾರ್ಖಂಡ್‌ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದ ಅಜಯ್‌ ಅವರು, ಗುರುವಾರ ದೆಹಲಿಯಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸಮ್ಮುಖದಲ್ಲಿ ಆಮ್‌ ಆದ್ಮಿ ಪಕ್ಷ ಸೇರಿದರು.

ಅಮೆರಿಕ, ರಷ್ಯಾ ಯುದ್ಧವಾದರೆ 5 ತಾಸಲ್ಲಿ 4 ಕೋಟಿ ಬಲಿ!

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ ಅಜಯ್‌ ಕುಮಾರ್‌ ಅವರು ಜೆಮ್‌ಶೆಡ್‌ಪುರದಲ್ಲಿ ಐಪಿಎಸ್‌ ಅಧಿಕಾರಿಯಾಗಿ ಸಾಕಷ್ಟುಹೆಸರು ಗಳಿಸಿದ್ದರು. ಬಳಿಕ ಹುದ್ದೆಗೆ ರಾಜೀನಾಮೆ ನೀಡಿ ಟಾಟಾ ಮೋಟ​ರ್‍ಸ್ ಕಂಪನಿಗೆ ಸೇರ್ಪಡೆಯಾಗಿದ್ದರು. ಜಾರ್ಖಂಡ ವಿಕಾಸ ಮೋರ್ಚಾ ಸೇರಿದ್ದ ಅವರು, 2011ರಲ್ಲಿ ನಡೆದ ಉಪಚುನಾವಣೆಯಲ್ಲಿ 1.55 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿ ಸಂಸತ್‌ ಪ್ರವೇಶಿಸಿದ್ದರು. ನಂತರ ಕಾಂಗ್ರೆಸ್‌ ಸೇರಿ, ಅದರ ಅಧ್ಯಕ್ಷರಾಗಿದ್ದರು.