ಮಾಸ್ಕೋ [ಸೆ.20]: ಒಂದು ವೇಳೆ ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ಮತ್ತು ಅತಿದೊಡ್ಡ ದೇಶವಾಗಿರುವ ರಷ್ಯಾ ನಡುವೆ ಅಣ್ವಸ್ತ್ರ ಯುದ್ಧವೇನಾದರೂ ಸಂಭವಿಸಿದ್ದಲ್ಲಿ, ಕೇವಲ 5 ಗಂಟೆಯ ಒಳಗಾಗಿ 3.4 ಕೋಟಿಗೂ ಹೆಚ್ಚು ಜನರು ಸಾವನ್ನಪ್ಪಲಿದ್ದಾರೆ ಹಾಗೂ 5.75 ಕೋಟಿ ಮಂದಿ ಗಾಯಾಳುಗಳಾಗಲಿದ್ದಾರೆ ಎಂದು ಸಂಶೋಧನೆಯೊಂದು ಹೇಳಿದೆ. 

ವಿಶ್ವದ ಶೇ.91ಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಭಯ ರಾಷ್ಟ್ರಗಳ ಬಳಿ ಒಟ್ಟಾರೆ 12,685 ಅಣ್ವಸ್ತ್ರದ ಸಿಡಿತಲೆಗಳು ಇವೆ ಎಂದು ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ(ಎಸ್‌ಐಪಿಆರ್‌ಐ) ತನ್ನ 2019ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಉಲ್ಲೇಖಿಸಿದೆ. ಒಂದು ವೇಳೆ ರಷ್ಯಾ ಮತ್ತು ಅಮೆರಿಕದ ನ್ಯಾಟೋ ಪಡೆಗಳು ನೇರವಾಗಿ ಅಣ್ವಸ್ತ್ರ ಬಳಕೆಯಲ್ಲಿ ಸಕ್ರಿಯವಾದರೆ, ಪರಿಸ್ಥಿತಿ ಏನಾಗಬಹುದು? ಎಂಬ ವಿಶ್ಲೇಷಣೆಗಳು ನಡೆದಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದು ವೇಳೆ ಇಂಥ ಪರಿಸ್ಥಿತಿ ಏರ್ಪಟ್ಟರೆ, ಇದು ಊಹಿಸಿಕೊಳ್ಳಲಾಗದಷ್ಟುಭಯಾನಕವಾಗಿರಲಿದ್ದು, ಕೇವಲ 5 ಗಂಟೆ ಅವಧಿಯೊಳಗೆ 9.1 ಕೋಟಿ ಮಂದಿ ಈ ದುರಂತಕ್ಕೆ ಸಿಲುಕಲಿದ್ದಾರೆ. ಅಲ್ಲದೆ, ಇದರಿಂದ ವಿಶ್ವದ ಬಲಿಷ್ಠ ರಾಷ್ಟ್ರ ಎಂಬ ಹಣೆಪಟ್ಟಿಹೊಂದಿರುವ ಅಮೆರಿಕ ಮತ್ತು ರಷ್ಯಾ ರಾಷ್ಟ್ರಗಳು ಸಂಪೂರ್ಣವಾಗಿ ನಿರ್ನಾಮವಾಗಲಿವೆ ಎಂದು ವಿವಿಯ 4 ನಿಮಿಷಗಳ ಆಡಿಯೋ-ವಿಡಿಯೋದಲ್ಲಿ ಎಚ್ಚರಿಸಲಾಗಿದೆ.