Asianet Suvarna News Asianet Suvarna News

ಆರ್‌ಟಿಐ ಕಾರ‍್ಯಕರ್ತನ ಕೊಲೆ ಕೇಸ್‌: ಬಿಜೆಪಿ ಮಾಜಿ ಸಂಸದಗೆ ಜೀವಾವಧಿ

ಆರ್‌ಟಿಐ ಕಾರ‍್ಯಕರ್ತನ ಕೊಲೆ ಕೇಸ್‌: ಬಿಜೆಪಿ ಮಾಜಿ ಸಂಸದಗೆ ಜೀವಾವಧಿ| ಸಿಬಿಐ ವಿಶೇಷ ಕೋರ್ಟ್‌ನಿಂದ ಇತರ 6 ದೋಷಿಗಳಿಗೂ ಜೀವಾವಧಿ| ಮಾಜಿ ಸಂಸದ ಸೋಲಂಕಿ, ಆತನ ಅಳಿಯನಿಗೆ 15 ಲಕ್ಷ ರು. ದಂಡ

Former Gujarat BJP MP gets life term for murder of RTI activist
Author
Bangalore, First Published Jul 12, 2019, 9:34 AM IST
  • Facebook
  • Twitter
  • Whatsapp

ಅಹಮದಾಬಾದ್‌[ಜು.12]: ಗಿರ್‌ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಬಯಲು ಮಾಡಿದ ಆರ್‌ಟಿಐ ಕಾರ್ಯಕರ್ತ ಅಮಿತ್‌ ಜಿತ್ವಾ ಅವರನ್ನು 2010ರಲ್ಲಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಹಾಗೂ ಇತರ 6 ಮಂದಿಗೆ ಸಿಬಿಐನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಸಿಬಿಐನ ವಿಶೇಷ ಕೋರ್ಟ್‌ನ ನ್ಯಾಯಾದೀಶ ಕೆ.ಎಂ ದಾವೆ ಅವರು, ಮುಖ್ಯ ದೋಷಿಗಳಾದ ಸೋಲಂಕಿ ಹಾಗೂ ಆತನ ಅಳಿಯ ಶಿವ ಸೋಲಂಕಿಗೆ 15 ಲಕ್ಷ ರು. ದಂಡ ವಿಧಿಸಿದ್ದಾರೆ.

ಗಿರ್‌ ರಕ್ಷಿತಾರಣ್ಯದಲ್ಲಿ ಸೋಲಂಕಿ ಅವರು ಭಾಗಿಯಾಗಿದ್ದ ಅಕ್ರಮ ಗಣಿಗಾರಿಕೆಯನ್ನು 2010ರಲ್ಲಿ ವಕೀಲರಾಗಿದ್ದ ಅಮಿತ್‌ ಜಿತ್ವಾ ಅವರು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಮೂಲಕ ಬಯಲಿಗೆಳೆದಿದ್ದರು. ಇದರಿಂದ ಆಗ(2009-14ರವರೆಗೂ ಜುನಾಗಢ ಕ್ಷೇತ್ರ) ಸಂಸದರಾಗಿದ್ದ ಸೋಲಂಕಿ ಹಾಗೂ ಆತನ ಅಳಿಯ ಶಿವ ಸೋಲಂಕಿ ಕ್ರೋಧಗೊಂಡಿದ್ದರು.

ಕೊಲೆ ಕೇಸಲ್ಲಿ ಬಿಜೆಪಿ ಮಾಜಿ ಸಂಸದ ದೋಷಿ

ಈ ಪ್ರಕರಣ ಕುರಿತು ವಿಚಾರಣೆ ನಡೆಯಬೇಕಿದ್ದ ದಿನವೇ ಗುಜರಾತ್‌ ಹೈಕೋರ್ಟ್‌ ಆವರಣದಲ್ಲಿ 2010ರ ಜು.20ರಂದು ಅಮಿತ್‌ ಜಿತ್ವಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಮೊದಲಿಗೆ ವಿಚಾರಣೆ ನಡೆಸಿದ್ದ ಅಹಮದಾಬಾದ್‌ ಅಪರಾಧ ವಿಭಾಗದ ಪೊಲೀಸರು, ದಿನು ಸೋಲಂಕಿಗೆ ಕ್ಲೀನ್‌ ಚಿಟ್‌ ನೀಡಿದ್ದರು. ಆದರೆ, ಈ ಪ್ರಕರಣದ ತನಿಖೆ ಕುರಿತು ಅಸಂತೃಪ್ತಿ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಪ್ರಕರಣದ ತನಿಖೆಯನ್ನು 2013ರಲ್ಲಿ ಸಿಬಿಐಗೆ ವಹಿಸಿತ್ತು.

Follow Us:
Download App:
  • android
  • ios