ಅಹಮದಾಬಾದ್‌ [ಜು.07]: ಅಕ್ರಮ ಕಲ್ಲಿದಲು ಹಗರಣ ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್‌ಟಿಐ ಕಾರ್ಯಕರ್ತ ಅಮಿತ್‌ ಜೆಥ್ವಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ದಿನು ಸೋಲಂಕಿ ಸೇರಿದಂತೆ 6 ಮಂದಿಯನ್ನೂ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 

ಗಿರ್‌ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲಿದ್ದಲು ಗಣಿಗಾರಿಕೆ ವಿರೋಧಿಸಿ ಆರ್‌ಟಿಐ ಕಾರ್ಯಕರ್ಯ ಅಮಿತ್‌ ದೊಡ್ಡ ಪ್ರಮಾಣದಲ್ಲಿಯೇ ಧ್ವನಿ ಎತ್ತಿದ್ದರು. 

2010ರಲ್ಲಿ ಅವರು ಹತ್ಯೆಗೀಡಾಗಿದ್ದರು. ಜುಲೈ 11ರಂದು ದೋಷಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.