ಬೆಂಗಳೂರು[ಜ.01]  ಬಿಜೆಪಿಯಿಂದ ಶಾಸಕರಿಗೆ ಆಮಿಷ ವಿಚಾರದಲ್ಲಿ ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡುತ್ತಿಲ್ಲ. ಆಧಾರ ಇಟ್ಟುಕೊಂಡೇ ಹೇಳಿದ್ದೀನಿ. ಶಾಸಕ ಬಿ.ಸಿ.ಪಾಟೀಲ್ ಗೆ ಅವರು ಆಫರ್ ಕೊಟ್ಟಿರಲಿಲ್ವ? ಸಮಯ ಬರಲಿ, ಇನ್ನೂ ಕೆಲವರಿಂದ ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ, ಎಂದು ಟ್ವೀಟ್ ಮಾಡಿ ಸಿದ್ದರಾಮಯ್ಯ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.

ಸಿದ್ದಾರಾಮಯ್ಯ ಮತ್ತು ಸದಾನಂದ ಗೌಡರ ನಡುವೆ ಟ್ವೀಟ್ ಸಮರ ಮುಂದುವರಿದಿದೆ. ಕುದುರೆ ವ್ಯಾಪಾರದಿಂದ ಶುರುವಾದ ಟ್ವೀಟ್ ಸಮರ ಕುದುರೆ ಏರಲಾರದವನು... ಕುದುರೆಯಿಂದ ಇಳಿದು ಓಡಿ ಹೋದವನು...ಹೀಗೆ ಶಬ್ದಗಳ ಪ್ರಯೋಗ ಮುಂದುವರಿದಿತ್ತು

 ಸದಾನಂದ ಗೌಡ  ಅವರೇ, ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ, 'ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ...' ಎಷ್ಟೆಂದರೂ , ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ವೇ ನೀವು..ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ , ಕೇಂದ್ರ ಸಚಿವ ಸದಾನಂದ ಗೌಡರ ಕಾಲೆಳೆದಿದ್ದರು.

ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ ಎಂದು ಸಿದ್ದರಾಮಯ್ಯ  ಮೊದಲು ಟ್ವೀಟ್ ಮಾಡಿದ್ದರು.

ಬಿಎಸ್‌ವೈ, ಕತ್ತಿ ಅತೃಪ್ತ ಆತ್ಮಗಳು: ಸಿದ್ದು ಕಿಡಿ!

ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ ಕರ್ನಾಟಕ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ? ಎಂದು ಸಿದ್ದರಾಮಯ್ಯ ಬಿಜೆಪಿ ಕೆಣಕಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ಮಾಡಿದ್ದ ಸದಾನಂದ ಗೌಡ  ‘ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ . ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕ್ಕೊಳ್ಳಲು ಇದೊಂದು ಹೊಸ ಪ್ರಹಸನ  ಎಂದು ತಿರುಗೇಟು ನೀಡಿದ್ದರು.