ವಿಧಾನಸೌಧದ ಬಳಿ ಸಿಕ್ಕ ರೂ. 2 ಕೋಟಿ ಹಣ ಯಾರದ್ದು ಅನ್ನುವುದು ಯಡಿಯೂರಪ್ಪನವರಿಗೆ ಗೊತ್ತಿದೆ. ಯಾರಿಂದ ಯಾರಿಗೆ ತಲುಪಿಸಲು ಹೋಗುತ್ತಿದ್ದ ಹಣ ಎಂಬ ಮಾಹಿತಿ ಅವರ ಬಳಿ ಇದೆ. ಅದನ್ನು ಬಹಿರಂಗಪಡಿಸಬೇಕು ಎಂದರು. ಸಾರಾಯಿ ನಿಷೇಧ ಮಾಡಿದ್ದು, ಬಿಜೆಪಿಯಲ್ಲ, ಜೆಡಿಎಸ್. ರಾಜ್ಯದ ಹೆಸರು ಕುಲಗೆಡಿಸಿದ್ದು ಬಿಜೆಪಿ. ಪ್ಯಾಕೇಜ್ ಪದ್ದತಿ ಭ್ರಷ್ಟಾಚಾರ ಮಾಡಿತ್ತು. ಮಹದಾಯಿ ವಿಚಾರದಲ್ಲಿ ಬಿಜೆಪಿ ಡ್ರಾಮಾ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ (ಅ.24): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನ ಪಡೆದರು.
ಬಳಿಕ ಮಾತನಾಡಿದ ಮಾಜಿ ಸಿ ಎಂ ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಅಪ್ಪ ಮಕ್ಕಳ ರಾಜಕೀಯ ಮಾಡುತ್ತಾ ಇರೋದು ಯಾರು ಎಂದು ಟೀಕಿಸಿದರು.
ಇನ್ನೂ ವಿಧಾನಸೌಧದ ಬಳಿ ಸಿಕ್ಕ ರೂ. ೨ ಕೋಟಿ ಹಣ ಯಾರದ್ದು ಅನ್ನುವುದು ಯಡಿಯೂರಪ್ಪನವರಿಗೆ ಗೊತ್ತಿದೆ. ಯಾರಿಂದ ಯಾರಿಗೆ ತಲುಪಿಸಲು ಹೋಗುತ್ತಿದ್ದ ಹಣ ಎಂಬ ಮಾಹಿತಿ ಅವರ ಬಳಿ ಇದೆ. ಅದನ್ನು ಬಹಿರಂಗಪಡಿಸಬೇಕು ಎಂದರು. ಸಾರಾಯಿ ನಿಷೇಧ ಮಾಡಿದ್ದು, ಬಿಜೆಪಿಯಲ್ಲ, ಜೆಡಿಎಸ್. ರಾಜ್ಯದ ಹೆಸರು ಕುಲಗೆಡಿಸಿದ್ದು ಬಿಜೆಪಿ. ಪ್ಯಾಕೇಜ್ ಪದ್ದತಿ ಭ್ರಷ್ಟಾಚಾರ ಮಾಡಿತ್ತು. ಮಹದಾಯಿ ವಿಚಾರದಲ್ಲಿ ಬಿಜೆಪಿ ಡ್ರಾಮಾ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
