ಬೆಳಗಾವಿ (ಮಾ, 20):  ಗುಂಡು ಹಾರಿಸಿ ಮಾಜಿ ಶಾಸಕನ ಪುತ್ರನ ಕೊಲೆ ಮಾಡಿರುವ ದಾರುಣ ಘಟನೆ ಇಲ್ಲಿನ ಧಾಮಣೆ ಬಳಿ ನಡೆದಿದೆ. 

ಚಿಂತಕ ದಿನೇಶ್ ಅಮೀನ್ ಮಟ್ಟು ಸಹಿತ ಐವರ ಮೇಲೆ ಕೇಸು ದಾಖಲು

ನಗರದ ವಡಗಾವಿಯ ನಿವಾಸಿ ಅರುಣ ನಂದಿಹಳ್ಳಿ ಕೊಲೆಯಾದ ದುರ್ದೈವಿ.  ಅರುಣ ನಂದಿಹಳ್ಳಿ ಮಾಜಿ ಶಾಸಕ ಪರಶುರಾಮರ ಪುತ್ರ. ಅರುಣ್ ಕಾರಿನಲ್ಲಿ ಪ್ರಯಾಣಿಸುವಾಗ ಅಡ್ಡಗಟ್ಟಿ ಎದೆಗೆ ಗುಂಡು ಹಾಕಿ ಕೊಲೆ ಮಾಡಲಾಗಿದೆ. 

ಹಣಕಾಸಿನ ವ್ಯವಹಾರದ ಹಿನ್ನೆಲೆ ಹತ್ಯೆ ನಡೆದಿರಬಹುದು ಎನ್ನಲಾಗಿದೆ.  ಅರುಣ ನೌಕರಿ ಕೊಡಿಸುವುದಾಗಿ ಹಣ ಪಡದಿದ್ದನು. ಆ ಹಣ ಮರಳಿ ಕೊಡುವ ವಿಚಾರದಲ್ಲಿ ಗಲಾಟೆಯಾಗಿದೆ. ನಿನ್ನೆ ತಡರಾತ್ರಿ ಅರುಣ್ ಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಇವರ ಹೆಸರಲ್ಲಿದೆ ಖಾನ್ ಮತ್ತು ಶಾಸ್ತ್ರಿ: ಹನೀಫ್‌ಗೆ ಸಿಕ್ಕಿದೆ ಪದ್ಮಶ್ರೀ! 

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.