ಈ ಮೂಲಕ ಅವರು ತಮ್ಮ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಿದರು.

ವಾರಣಾಸಿ(ಮಾ.08): ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟಿವ್ ವಾ ತಮ್ಮ ಸ್ನೇಹಿತನ ಕೊನೆಯ ಆಸೆಯನ್ನು ಭಾರತದಲ್ಲಿ ಈಡೇರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾರಣಾಸಿಯ ಗಂಗಾ ನದಿಯ ಮಣಿಕರ್ಣಿಕಾ ಘಾಟ್'ಗೆ ನಿನ್ನೆ ಮತ್ತೊಬ್ಬ ಸ್ನೇಹಿತ ಜಾನ್ಸನ್ ಜೊತೆ ಆಗಮಿಸಿದ್ದ ಸ್ಟೀವ್ ವಾ ಕೆಲವು ತಿಂಗಳ ಹಿಂದೆ ಮೃತರಾದ ತಮ್ಮ ಸ್ನೇಹಿತ ಸ್ಟೀಪನ್ ಅವರ ಅಸ್ಥಿಯನ್ನು ಪವಿತ್ರ ಗಂಗಾ ನದಿಯಲ್ಲಿ ವಿಸರ್ಜಿಸಿದರು. ಈ ಮೂಲಕ ಅವರು ತಮ್ಮ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಿದರು.

ತಾವು ಹಾಗೂ ಸ್ಟೀಫನ್ ಧೀರ್ಘ ಕಾಲದ ಸ್ನೇಹಿತರಾಗಿದ್ದು, ಆತ ಮರಣಿಸಿದಾಗ ಆತನ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸುವುದಾಗಿತ್ತು. ಅಲ್ಲದೆ ಸ್ಟೀಫನ್ ಕೃಷ್ಣ ದೇವರ ಅನನ್ಯ ಭಕ್ತರಾಗಿದ್ದರು. ಆಗಾಗ ಇಸ್ಕಾನ್ ದೇಗುಲಕ್ಕೆ ಭೇಟಿ ನೀಡುತ್ತಿದ್ದರು' ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮದವರು ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ಸರಣಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಯಾವ ತಂಡ ಜಯಗಳಿಸಿದರೂ ಸಂತಸವೆ ಎಂದು ತಿಳಿಸಿದ್ದಾರೆ.