ಪಕ್ಷ ತೊರೆದಿದ್ದ ಮಾಜಿ ಸಿಎಂ ಮತ್ತೆ ಕಾಂಗ್ರೆಸ್ ಸೇರ್ಪಡೆ

First Published 13, Jul 2018, 2:59 PM IST
Former Andhra Pradesh Chief Minister Kiran Kumar Reddy join  Congress
Highlights

ಕಾಂಗ್ರೆಸ್ ತೊರೆದಿದ್ದ ಮುಖಂಡ ಇದೀಗ ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ನಾಲ್ಕು ವರ್ಷಗಳ ಬಳಿಕ ಇದೀಗ ಪಕ್ಷಕ್ಕೆ ವಾಪಸಾಗಿದ್ದಾರೆ. 

ನವದೆಹಲಿ :  ಕಾಂಗ್ರೆಸ್ ತೊರೆದು ನಾಲ್ಕು ವರ್ಷಗಳ ಬಳಿಕ ಇದೀಗ ಮತ್ತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಕಳೆದ ನಾಲ್ಕು ವರ್ಷಗಳ ಹಿಂದೆ ಕಿರಣ್ ಕುಮಾರ್ ಕಾಂಗ್ರೆಸ್ ತೊರೆದಿದ್ದರು. ಈ ಬಗ್ಗೆ ಕಾಂಗ್ರೆಸ್ ಸಂವಹನ ಮುಖ್ಯಸ್ಥರಾದ ರಣದೀಪ್ ಸರ್ಜೆವಾಲಾ ಅವರು ಕಿರಣ್ ಕುಮಾರ್ ಅವರು ಪಕ್ಷಕ್ಕೆ ವಾಪಸಾಗುವ ಬಗ್ಗೆ ಘೋಷಿಸಿದ್ದರು. 

ಎಐಸಿಸಿ ಆಂಧ್ರ ಪ್ರದೇಶ ಉಸ್ತುವಾರಿ ಒಮನ್ ಚಾಂಡಿ ಅವರನ್ನು ಭೇಟಿ ಮಾಡಿ  ಸರ್ಜೆವಾಲಾ  ಹಾಗೂ ಎನ್. ರಘುವೀರ್ ನೇತೃತ್ವದಲ್ಲಿ ಪಕ್ಷಕ್ಕೆ ಮರಳಿದ್ದಾರೆ. 

2014ರ ಫೆಬ್ರವರಿ ತಿಂಗಳಲ್ಲಿ ಕಿರಣ್ ಕುಮಾರ್ ಅವರು ಪಕ್ಷವನ್ನು ತೊರೆದಿದ್ದರು. ಇದೀಗ ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ಪಕ್ಷಕ್ಕೆ ಸೇರಿದ್ದಾರೆ. 

loader