ಶಾಪಿಂಗ್‌ ಮುಗಿಸಿ ಮನೆಗೆ ಹಿಂತಿರುಗುವಾಗ ಏನೋ ಬಿಟ್ಟು ಬಂದ ಕಾರಣ ಅವರ ತಾಯಿ ವಾಪಸ್‌ ತೆರಳಿದ್ದರು. ‘ನಾನು ರಸ್ತೆಯಲ್ಲಿಯೇ ನಿಂತುಕೊಂಡು ಅಮ್ಮನಿಗಾಗಿ ಕಾಯುತ್ತಿದೆ.

ಬೆಂಗಳೂರು(ಮಾ.12): ಶಾಪಿಂಗ್‌ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಅಫ್ರಿಕನ್‌ ಮೂಲದ ಯುವಕನೊಬ್ಬ ಚಿತ್ರನಟಿ ಶ್ವೇತಾ ಪಂಡಿತ್‌ ಜತೆ ಅನುಚಿತವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
‘ಉರ್ವಿ' ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡುವ ವೇಳೆ ಘಟನೆ ಕುರಿತು ವಿವರಿಸಿದ್ದಾರೆ. ಯಲಹಂಕ ಉಪನಗರ ನಿವಾಸಿಯಾಗಿರುವ ಶ್ವೇತಾ ಪಂಡಿತ್‌ ಅವರು ಮನೆ ಬಳಿ ಇರುವ ಸೂಪರ್‌ ಮಾರ್ಕೆಟ್‌ಗೆ ತಾಯಿಯೊಂದಿಗೆ ತೆರಳಿದ್ದರು. ಶಾಪಿಂಗ್‌ ಮುಗಿಸಿ ಮನೆಗೆ ಹಿಂತಿರುಗುವಾಗ ಏನೋ ಬಿಟ್ಟು ಬಂದ ಕಾರಣ ಅವರ ತಾಯಿ ವಾಪಸ್‌ ತೆರಳಿದ್ದರು. ‘ನಾನು ರಸ್ತೆಯಲ್ಲಿಯೇ ನಿಂತುಕೊಂಡು ಅಮ್ಮನಿಗಾಗಿ ಕಾಯುತ್ತಿದೆ. ಆಗ ಬೈಕ್‌ನಲ್ಲಿ ಬಂದ ಆಫ್ರಿಕಾ ಯುವಕನೊಬ್ಬ ‘ಆರ್‌ ಯೂ ಕಮಿಂಗ್‌...?' ಎಂಬುದಾಗಿ ಕರೆದ ಎಂದು ಶ್ವೇತಾ ಪಂಡಿತ್‌ ತಿಳಿಸಿದ್ದಾರೆ.
ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಹೋಗುತ್ತಿದ್ದೆ. ಮತ್ತೆ ಎದುರಿಗೆ ಬಂದು ಬೈಕ್‌ ಅಡ್ಡ ಹಾಕಿದ. ‘ಹು ಆರ್‌ ಯೂ...?' ಎಂದು ಜೋರು ಮಾಡಿದೆ. ಪೊಲೀಸರನ್ನು ಕರೆಯುವುದಾಗಿ ಹೇಳಿದೆ. ಆದರೂ ಆ ಯುವಕ ಅಲ್ಲಿಯೇ ನಿಂತುಕೊಂಡಿದ್ದ. ಇದರಿಂದ ಭಯವಾಗಿ ದಿಕ್ಕು ತೋಚದಂತಾಯಿತು. ಇನ್ನೇನು ರಸ್ತೆಯಲ್ಲಿದ್ದ ಕಲ್ಲು ತೆಗೆದು ಹೊಡಿಬೇಕು ಎನ್ನಿಸಿತು. ಕ್ರೈಮ್‌ ಬೇಡ ಎಂದು ಸುಮ್ಮನಾದೆ. ಅಷ್ಟರಲ್ಲಿ ಆ ಯುವಕ ಅಲ್ಲಿಂದ ಹೊರಟ ಹೋದ ಎಂದು ಹೇಳಿದ್ದಾರೆ.