ಬೆಂಗಳೂರು[ಡಿ.07]  ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಎದುರಾಗಿದ್ದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸರ್ಕಾರ ರಚನೆ ಮಾಡಿಕೊಂಡು 6 ತಿಂಗಳೂ ಕಳೆದಿವೆ. ದೋಸ್ತಿ ಸರ್ಕಾರ ಆಡಳಿತವನ್ನು ನಡೆಸುತ್ತಿದೆ. ಆದರೆ ಲೋಕಸಭೆ ಚುನಾವಣೆಗೆ ಇನ್ನೊಂದು 5 ತಿಂಗಳು ಬಾಕಿ ಇರುವಾಗ 5 ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆದಿದೆ. ಹಾಗಾದರೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಬಹುದು?

1. ಆಪರೇಶನ್‌ ಕಮಲಕ್ಕೆ ಬ್ರೇಕ್:  ಸಮೀಕ್ಷಾ ವರದಿ ಹೇಳುವಂತೆ ಬಿಜೆಪಿಗೆ ಹಿನ್ನಡೆ ಆಗಿದ್ದೆ ಆದಲ್ಲಿ ರಾಜ್ಯ ರಾಜಕಾರಣದಲ್ಲಿ ಆಗಾಗ ಏಳುತ್ತಿರುವ ಆಪರೇಶನ್ ಕಮಲದ ಕೂಗಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

2. ಕಾಂಗ್ರೆಸ್‌ ಗೆ ಸಂಘಟನೆ ಬಲ: ಜೆಡಿಎಸ್‌ನೊಂದಿಗೆ ಕೈ ಜೋಡಿಸಿ ಸಂಘಟನೆಯಲ್ಲಿ ಹಿಂದೆ ಬಿದ್ದಿರುವ ಕಾಂಗ್ರೆಸ್ ಸೋತರೂ ಅಥವಾ ಗೆದ್ದರೂ ಎಚ್ಚೆತ್ತುಕೊಂಡು ಲೋಕಸಭಾ ಚುನಾವಣೆಗೆ ಸಿದ್ಧವಾಗಬಹುದು.

ಮೈತ್ರಿ ಸರ್ಕಾರ ಉರುಳಿಸಲು ಇವರಿಬ್ಬರೇ ಸಾಕಂತೆ: ಯಾರವರು..?

3. ಮೈತ್ರಿಗೆ ಬಲ: ದೋಸ್ತಿಗಳು ಮತ್ತಷ್ಟು ಗಟ್ಟಿಯಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ತೀರ್ಮಾನಕ್ಕೆ ಬರಬಹುದು.

4.ಬಿಜೆಪಿ ನಾಯಕತ್ವ ಬದಲಾವಣೆ: ಬಿಜೆಪಿಯಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿರುವ ನಾಯಕತ್ವ ಬದಲಾವಣೆ ಕೂಗು ಜೋರಾಗಿ ಯುವ ನಾಯಕತ್ವಕ್ಕೆ ಬೇಡಿಕೆ ಶುರುವಾಗಬಹುದು.

5. ಜೆಡಿಎಸ್‌ಗೆ ಆಯ್ಕೆ ಸಮಸ್ಯೆ: ಒಂದು ವೇಳೆ ಕಾಂಗ್ರೆಸ್‌ ಒಟ್ಟಾಗಿ ಚುನಾವಣೆ ಎದುರಿಸಲು ಬಂದರೂ ಜೆಡಿಎಸ್ ಹಿಂದೆ ಸರಿಯಬಹುದು. ಅಧಿಕಾರ ಕಂಡಿರುವ ಪಕ್ಷ  ತನಗೆ ಇಂತಿಷ್ಟು ವಿಧಾನಸಭಾ ಸೀಟು ಬಿಟ್ಟುಕೊಡುವಂತೆ ಪಟ್ಟು ಹಿಡಿದು ಕೂರಬಹುದು.