ಚಾಮರಾಜನಗರ (ಡಿ.7): ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕಿಡಿಕಾರಿದ್ದಾರೆ.

(ಶುಕ್ರವಾರ) ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ನಾವು ಬೀಳಿಸಲು ಹೋಗಲ್ಲ. ಆಪರೇಷನ್ ಕಮಲ ಮಾಡುವ ಅವಶ್ಯಕತೆಯೂ ಇಲ್ಲ. ತಾನಾಗಿಯೇ ಸರ್ಕಾರ ಪತನಗೊಳ್ಳಲಿದ್ದು, ಅಸಮಾಧಾನಿತ ಶಾಸಕರೇ ಸೂಸೈಡ್ ಬಾಂಬರ್ ಗಳಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಸರ್ಕಾರ ಬೀಳುವುದಕ್ಕೆ ಬಿಜೆಪಿ ಕಾರಣ ಆಗುವುದಿಲ್ಲ. ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣರಾಗುತ್ತಾರೆ. ಇನ್ನು ಹೆಚ್.ಡಿ. ರೇವಣ್ಣ ವಿರುದ್ಧ ಕಿಡಿಕಾರಿದ ಅಶೋಕ್, ರೇವಣ್ಣ ಅವರು ಗುಳಿಕಾಲ ನೋಡಿ ಕೊಂಡೆ ಕೆಲಸ ಮಾಡ್ತಾರೆ.

ಜೇಬಿನಲ್ಲಿ ಯಾವಾಗಲು ನಿಂಬೆಹಣ್ಣು ಇಟ್ಟೊಕೊಂಡೆ ಇರ್ತಾರೆ. ಮೂಡನಂಬಿಕೆಗೆ ಕಟ್ಟುಬಿದ್ದು ವಿಧಾನಸೌಧಕ್ಕೆ ಚಪ್ಪಲೀನು ಹಾಕ್ಜೊಂಡು ಬರಲ್ಲ ಎಂದು ವ್ಯಂಗ್ಯವಾಡಿದರು.

ಆದ್ರೆ ಈಗ ರೇವಣ್ಣ ಅವರಿಗೆ ರಾಹುಕಾಲ ಬಂದಿದ್ದು, ಅವರ ಅಧಿಕಾರ ಹೋಗಲೇಬೇಕು. ರಾಹುಕಾಲ ಎದುರಾಗಿರುವುದರಿಂದ ಸರ್ಕಾರ ಉಳಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಆರ್.ಅಶೋಕ್ ಚಾಟಿ ಬೀಸಿದರು.