ಪ್ರಥಮ ದಿನವಾದ ಸೋಮವಾರ ಸ್ವಾಮೀಜಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು. ವಾತ್ಸಲ್ಯಮೂರ್ತಿ ಆಚಾರ್ಯ ಗುಣನಂದಿ ಮುನಿಮಹಾರಾಜರಿಂದ ದೀಕ್ಷಿತರಾದ ಪರಮಪೂಜ್ಯ ಆರ್ಯಿಕಾ ಆದಿತ್ಯಶ್ರೀ ಮಾತಾಜಿ, ಆರ್ಯಿಕಾ ದಿಶಾಶ್ರೀ ಮಾತಾಜಿ, ದೀಪ್ತಿಶ್ರೀ ಮಾತಾಜಿ ಹಾಗೂ ಆರ್ಯಿಕಾ ನಿತ್ಯಶ್ರೀ ಮಾತಾಜಿಗಳ ಸಂಘವು ಪಾವನ ಸಾನಿಧ್ಯ ವಹಿಸಿದ್ದರು.

ರಿಪ್ಪನ್‌ಪೇಟೆ(ನ.06): ಸಮೀಪದ ಅತಿಶಯ ಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಪದ್ಮಾವತಿ ಅಮ್ಮನವರ ಮಹಾಸನ್ನಿಧಿಯಲ್ಲಿ ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರಪ್ರಥಮ ಬಾರಿಗೆ ಜಿನಸಹಸ್ರನಾಮ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಪ್ರಥಮ ದಿನವಾದ ಸೋಮವಾರ ಸ್ವಾಮೀಜಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು. ವಾತ್ಸಲ್ಯಮೂರ್ತಿ ಆಚಾರ್ಯ ಗುಣನಂದಿ ಮುನಿಮಹಾರಾಜರಿಂದ ದೀಕ್ಷಿತರಾದ ಪರಮಪೂಜ್ಯ ಆರ್ಯಿಕಾ ಆದಿತ್ಯಶ್ರೀ ಮಾತಾಜಿ, ಆರ್ಯಿಕಾ ದಿಶಾಶ್ರೀ ಮಾತಾಜಿ, ದೀಪ್ತಿಶ್ರೀ ಮಾತಾಜಿ ಹಾಗೂ ಆರ್ಯಿಕಾ ನಿತ್ಯಶ್ರೀ ಮಾತಾಜಿಗಳ ಸಂಘವು ಪಾವನ ಸಾನಿಧ್ಯ ವಹಿಸಿದ್ದರು.

ಮಂಗಳವಾದ್ಯ ಘೋಷ, ನಾಂದಿಮಂಗಳ, ಶ್ರೀಗಳ ನಿಮಂತ್ರಣ, ಇಂದ್ರಪ್ರತಿಷ್ಠೆ, ಕಂಕಣ ಬಂಧನ, ಮಂಗಳಕುಂಭ ನಯನ, ಪಂಚಾಮೃತ ಅಭಿಷೇಕ, ಶಾಂತಿಮಂತ್ರ, ಪೀಠಯಂತ್ರ ಆರಾಧನೆ, ಧ್ವಜಾರೋಹಣ, ಮಂಟಪವೇದಿ ಪ್ರತಿಷ್ಠಾ, ಅಖಂಡದೀಪ ಸ್ಥಾಪನಾ, ಮಂಗಳಕುಂಭ ಸ್ಥಾಪನಾ, ಪಂಚಕುಂಭ ವಿನ್ಯಾಸ, ಅಂಕುರಾರ್ಪಣ, ಶಾಂತಿಹೋಮ, ಜಿನಸಹಸ್ರನಾಮ ಆರಾಧನಾ ವಿಧಾನಪೂಜೆಗಳು ನೆರವೇರಿದವು.