ಹೊಸ ವರ್ಷಕ್ಕೆ ಮೊದಲ ದಿನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.​

ಬೆಂಗಳೂರು (ಡಿ.30): ಹೊಸ ವರ್ಷಕ್ಕೆ ಇದೊಂತರ ಸ್ಪೆಷಲ್ ನ್ಯೂಸ್. ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಇದೀಗ ಬೆಂಗಳೂರಿನಲ್ಲಿ ವಿನೂತನ ಕ್ರಮ ಒಂದನ್ನು ಕೈಗೊಳ್ಳಲಾಗುತ್ತಿದೆ.

Add Asianetnews Kannada as a Preferred SourcegooglePreferred

ಹೊಸ ವರ್ಷಕ್ಕೆ ಮೊದಲ ದಿನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಈ ಬಗ್ಗೆ ಬೆಂಗಳೂರು ಮೇಯರ್ ಆರ್ ಸಂಪತ್ ರಾಜ್ ಈ ವಿಚಾರವನ್ನು ತಿಳಿಸಿದ್ದಾರೆ.

ಜನವರಿ ಒಂದರಂದು ಮೊದಲು ಜನಿಸಿದ ಹೆಣ್ಣು ಮಗುವಿಗೆ ಪದವಿ ಶಿಕ್ಷಣದವರೆಗೂ ಉಚಿತವಾಗಿ ಶಿಕ್ಷಣ ದೊರಕಲಿದೆ.ಆಕೆಗೆ ಶಿಕ್ಷಣ ಪಡೆಯಲು ಯಾವುದೇ ರೀತಿಯಾದ ಸಮಸ್ಯೆ ಎದುರಾಗಬಾರದು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಯಾವುದೇ ಬಡ ಕುಟುಂಬದ ಗರ್ಭಿಣಿಯು ಹೆಣ್ಣು ಮಗು ಹುಟ್ಟಿದರೆ ಕುಟುಂಬಕ್ಕೆ ಸಮಸ್ಯೆ ಎಂದುಕೊಳ್ಳುತ್ತಾರೆ. ಆಕೆಯ ಶಿಕ್ಷಣಕ್ಕೆ ನೆರವಾಗಿ ಆಕೆ ಹೊರೆ ಎನ್ನುವ ಮನಸ್ಥಿತಿ ತಪ್ಪಿಸಲು ಇಂತಹ ವಿನೂತನ ಕ್ರಮ ದನ್ನು ಕೈಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.