ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ಜಮೀನೊಂದರಲ್ಲಿ ಭೂಮಿ ಒಳಗಿನಿಂದ ಕೆಂಪು ಜ್ವಾಲೆ ಹೊರಹೊಮ್ಮಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಚಳ್ಳಕೆರೆ: ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ಜಮೀನೊಂದರಲ್ಲಿ ಭೂಮಿ ಒಳಗಿನಿಂದ ಕೆಂಪು ಜ್ವಾಲೆ ಹೊರಹೊಮ್ಮಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅ.2ರಂದು ತಿಪ್ಪೇಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಸಂಜೆ 4 ಗಂಟೆ ಸುಮಾರಿನಲ್ಲಿ ಈ ಕೆಂಪುಜ್ವಾಲೆ ಕಾಣಿಸಿಕೊಂಡಿತ್ತು.

ಭೂಗರ್ಭ ಇಲಾಖೆಗೆ ಈ ಕುರಿತ ವರದಿ ಕಳಿಸಲಾಗಿದೆ.