ಬೆಂಗಳೂರು( ಮಾ. 07)   ಸೋಸಲೆ ಮಠದ ಪೀಠಾಧಿಪತಿ ವಿರುದ್ಧ  ಎಫ್‌ಐಆರ್ ದಾಖಲಾಗಿದೆ. ವ್ಯಾಸರಾಯ ಮಠದ 41ನೇ ಪೀಠಾಧ್ಯಕ್ಷ ವಿದ್ಯಾಶ್ರೀಶ ಸ್ವಾಮೀಜಿ ಮೇಲೆ ಮೂಲ ಪ್ರತಿಮೆ ಬದಲು ಮಾಡಿದ ಆರೋಪ ಕೇಳಿ ಬಂದಿದ್ದು ಮಠದ ಭಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ

ಆಂಧ್ರಪ್ರದೇಶದ ಅನಂತಪುರದಲ್ಲಿ ವಿದ್ಯಾ ಶ್ರೀಶ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.  ಮಠದ ವೆಬ್‌ಸೈಟ್ ನಲ್ಲಿ ಪ್ರಕಟವಾದ ಪೋಟೋ ಮೂಲ ವಿಗ್ರಹಕ್ಕೂ ವ್ಯತ್ಯಾಸ ಇದೆ. ಮೂಲ ರೂಪದ ಡೂಬ್ಲಿಕೇಟ್ ವಿಗ್ರಹ ಮಾಡಿಟ್ಟಿರೋ ಶಂಕೆ ಇದೆ.  ಸದಾ ಕಾಲ ಸ್ವಾಮೀಜಿ ಬಳಿಯೇ ಇರೋ ಮೂಲ ವಿಗ್ರಹಗಳು ಬದಲಾಗಿರಬಹುದು ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಕೋಡಿಮಠದ ಶ್ರೀಗಳು ಹೇಳಿದ ನಾಡಿನ ಭವಿಷ್ಯ

ಮೂಲ ವಿಗ್ರಹ ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ 40 ನೇ ಪೀಠಾಧಿಪತಿ ವಿದ್ಯಾಮನೋಹರ ತೀರ್ಥ ಸ್ವಾಮೀಜಿ.  ಮೂಲ ವಿಗ್ರಹ ಪರಿಶೀಲನೆಗೆ ಅವಕಾಶ ಕೊಡಿ  ಎಂದು ಕೇಳಿದ್ದಾರೆ. ವಿಗ್ರಹ ಬದಲಾಣೆ ಬಗ್ಗೆ ಮೌನ ಮುರಿಯುವಂತೆ  ಹಾಲಿ ಸ್ವಾಮೀಜಿಯನ್ನು ಕೇಳಿಕೊಳ್ಳಲಾಗಿದೆ.