. ಅಲ್ಲದೆ ಇತರೆ ವಿಧಾನಸಭಾ ಸದಸ್ಯರ ಮತಗಳನ್ನೂ ಕೊಡಿಸುವುದಾಗಿ ಹೇಳಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಎಸ್.ಮೂರ್ತಿ ಅವರಿಂದ ಕೇಂದ್ರ ಚುನಾವಣಾ ಆಯೋಗ ವರದಿ ಕೇಳಿ ಸ್ಟಿಂಗ್ ಆಪರೇಷನ್ ಸಿಡಿ ಪರಿಶೀಲಿಸಿ FIR ದಾಖಲಿಸುವಂತೆ ಸೂಚಿಸಿತ್ತು.

ಬೆಂಗಳೂರು(ಜು.27): ರಾಜ್ಯಸಭಾ ಚುನಾವಣೇ ವೇಳೆ ಲಂಚದ ಬೇಡಿಕೆ ಇಟ್ಟಿದ ಆರೋಪದ ಮೇಲೆ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ವಿರುದ್ಧ ಎಫ್'ಐಆರ್ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2016ರ ಜೂನ್ 11ರಂದು ರಾಜ್ಯಸಭಾ ಚುನಾವಣೆ ಮತದಾನದ ಹಿನ್ನಲೆಯಲ್ಲಿ ರಾಷ್ಟ್ರೀಯ ವಾಹಿನಿ ನಡೆಸಿದ್ದ ಸ್ಟಿಂಗ್ ಆಪರೇಷನ್'ನಲ್ಲಿ ಸಿಕ್ಕಿ ಬಿದ್ದಿದ್ದ ಖೂಬಾ 5 ಕೋಟಿ ರೂ ಕೊಟ್ಟರೆ ತನ್ನ ಮತ ನೀಡುವುದಾಗಿ ಹೇಳಿದ್ದರು. ಅಲ್ಲದೆ ಇತರೆ ವಿಧಾನಸಭಾ ಸದಸ್ಯರ ಮತಗಳನ್ನೂ ಕೊಡಿಸುವುದಾಗಿ ಹೇಳಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಎಸ್.ಮೂರ್ತಿ ಅವರಿಂದ ಕೇಂದ್ರ ಚುನಾವಣಾ ಆಯೋಗ ವರದಿ ಕೇಳಿ ಸ್ಟಿಂಗ್ ಆಪರೇಷನ್ ಸಿಡಿ ಪರಿಶೀಲಿಸಿ FIR ದಾಖಲಿಸುವಂತೆ ಸೂಚಿಸಿತ್ತು. ಅಂದು ಚುನಾವಣಾಧಿಕಾರಿ ಎಸ್.ಮೂರ್ತಿ ಅವರು ಚುನಾವಣಾ ಆಯೋಗ ಸೂಚನೆಯಂತೆ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮೂರ್ತಿ ಅವರು ಖೂಬಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ -1998, IPC 171 B ಅಡಿ FIR ದಾಖಲಿಸಿದ್ದರು.