ರಸ್ತೆ ಗುಂಡಿ ಬಿದ್ದು ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತವರ ವಿರುದ್ಧ ಮತ್ತು ಏಜೆನ್ಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತೆ ಡಿ.ರೂಪಾ ಅವರು ಸೂಚಿಸಿದ್ದಾರೆ.
ಬೆಂಗಳೂರು: ರಸ್ತೆ ಗುಂಡಿ ಬಿದ್ದು ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತವರ ವಿರುದ್ಧ ಮತ್ತು ಏಜೆನ್ಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತೆ ಡಿ.ರೂಪಾ ಅವರು ಸೂಚಿಸಿದ್ದಾರೆ.
ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನಗಳ ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಮತ್ತು ಏಜೆನ್ಸಿ ವಿರುದ್ಧ ಆರ್‌ಎಂಎ ಕಾಯ್ದೆ 198ಎ ಅಡಿ ಪ್ರಕರಣ ದಾಖಲಿಸಲು ತಿಳಿಸಿದ್ದಾರೆ.
ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದಲೂ ಪ್ರಾಣಹಾನಿ ಸಂಭವಿಸುತ್ತಿದ್ದರೆ ಸಂಬಂಧಪಟ್ಟ ಇಲಾಖೆ ವಿರುದ್ಧ ಕ್ರಮ ಜರುಗಿಸುವಂತೆ ಸಲಹೆ ನೀಡಿದ್ದಾರೆ.
