ರಾಜ್ಯ ರಾಜಧಾನಿಯಲ್ಲಿ ಆಫ್ರಿಕನ್ ವ್ಯಕ್ತಿಗಳ ಪುಂಡಾಟ ಮುಂದುವರೆದಿದೆ. ಕಾರ್ಪೊರೇಷನ್ ಹತ್ತಿರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಆಫ್ರಿಕನ್ ಮೂಲದವರು ಹಾಗೂ ವಕೀಲರ ನಡುವೆ ಮಾರಾಮಾರಿ ನಡೆದಿದೆ.
ಬೆಂಗಳೂರು (ಮಾ.27): ರಾಜ್ಯ ರಾಜಧಾನಿಯಲ್ಲಿ ಆಫ್ರಿಕನ್ ವ್ಯಕ್ತಿಗಳ ಪುಂಡಾಟ ಮುಂದುವರೆದಿದೆ. ಕಾರ್ಪೊರೇಷನ್ ಹತ್ತಿರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಆಫ್ರಿಕನ್ ಮೂಲದವರು ಹಾಗೂ ವಕೀಲರ ನಡುವೆ ಮಾರಾಮಾರಿ ನಡೆದಿದೆ.
ಅಖಿಲ ಕರ್ನಾಟಕ ಮೈತ್ರಾ ಮಹಿಳಾ ಸಂರಕ್ಷಣಾ ಸಂಘದ ರಾಜ್ಯಾಧ್ಯಕ್ಷೆ ಜೊತೆ ಆಫ್ರಿಕನ್ ಮೂಲದವರು ಅಸಭ್ಯವಾಗಿ ವರ್ತಿಸಿದ್ದಾರೆ. ಕೇಸ್ ನಿಮಿತ್ತ ಲಲಿತಾ ಮೇರಿ ಕೋರ್ಟ್ಗೆ ಹಾಜರಾಗಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ನೆರೆದ ವಕೀಲರು ಹಾಗೂ ಉಗಾಂಡ ಮೂಲದವರ ನಡುವೆ ಮಾರಾಮಾರಿ ನಡೆದಿದೆ.
ಸದ್ಯ ಆಫ್ರಿಕನ್ ಮೂಲದ ಮೂವರನ್ನು ವಶಕ್ಕೆ ಪಡೆದಿರುವ ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
