ಮತ್ತೆ 4 ಬ್ಯಾಂಕ್’ಗಳ ವಿಲೀನಕ್ಕೆ ಮುಂದಾದ ಸರ್ಕಾರ..!

Fighting bad loans Govt may merge 4 state run banks
Highlights

ಐಡಿಬಿಐ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್’ಗಳು ವಿಲೀನಗೊಳ್ಳಲಿವೆ ಎನ್ನಲಾಗುತ್ತಿದೆ. ಕಳೆದ ಒಂದು ಹಣಕಾಸು ವರ್ಷದಲ್ಲಿ ಈ 4 ಬ್ಯಾಂಕ್’ಗಳು 21 ಆವಿರ ಕೋಟಿ ನಷ್ಟ ಅನುಭವಿಸಿವೆ. ಅದರಲ್ಲೂ ಐಡಿಬಿಐ ಬ್ಯಾಂಕ್ ಕಳಪೆ ಸಾಧನೆ ಮಾಡಿದ್ದು, 8,237.82 ಕೋಟಿ ನಷ್ಟ ಸಂಭವಿಸಿದೆ. 

ನವದೆಹಲಿ[ಜೂ.04]: ಹಾಲಿ ಇರುವ ಕೆಟ್ಟ ಸಾಲ ಪರಿಸ್ಥಿತಿಯನ್ನು ಮುಂದಾಗಿರುವ ಕೇಂದ್ರ ಸರ್ಕಾರ 4 ಬ್ಯಾಂಕ್’ಗಳನ್ನು ವಿಲೀನಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಐಡಿಬಿಐ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್’ಗಳು ವಿಲೀನಗೊಳ್ಳಲಿವೆ ಎನ್ನಲಾಗುತ್ತಿದೆ. ಕಳೆದ ಒಂದು ಹಣಕಾಸು ವರ್ಷದಲ್ಲಿ ಈ 4 ಬ್ಯಾಂಕ್’ಗಳು 21 ಆವಿರ ಕೋಟಿ ನಷ್ಟ ಅನುಭವಿಸಿವೆ. ಅದರಲ್ಲೂ ಐಡಿಬಿಐ ಬ್ಯಾಂಕ್ ಕಳಪೆ ಸಾಧನೆ ಮಾಡಿದ್ದು, 8,237.82 ಕೋಟಿ ನಷ್ಟ ಸಂಭವಿಸಿದೆ. ಒಂದು ವೇಳೆ ಈ ವಿಲೀನ ಪ್ರಕ್ರಿಯೆ ಸಂಭವಿಸಿದರೆ, ಎಸ್’ಬಿಐ ಬಳಿಕ ವಿಲೀನಗೊಂಡ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ವಿಲೀನ ಎನಿಸಲಿದೆ.  
ಇದರ ಜತೆಗೆ ಸರ್ಕಾರ ಸರ್ಕಾರ ಶೇ.51% ಪಾಲನ್ನು ಮಾರಾಟ ಮಾಡಲು ಚಿಂತನೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಎಸ್’ಬಿಐನೊಂದಿಗೆ ಅದರ 5 ಸಹಸದಸ್ಯ ಬ್ಯಾಂಕ್’ಗಳು ಹಾಗೂ ಮಹಿಳಾ ಬ್ಯಾಂಕ್’ಗಳನ್ನು ವಿಲೀನಗೊಳಿಸಲಾಗಿತ್ತು 

loader