ಶಾಸಕ, ಸಚಿವರಿಗೆ ಸಿಎಂ ಸಿದ್ದು ಹಬ್ಬದೂಟ! ಪಕ್ಷಾತೀತವಾಗಿ ಪಾಲ್ಗೊಂಡ ಶಾಸಕರು

First Published 22, Feb 2018, 8:08 AM IST
Feast In CM Siddaramaiah House
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗುರುಗಳಾದ ಸಿದ್ದಪ್ಪಾಜಿ ಹಬ್ಬ ಆಚರಣೆ ಅಂಗವಾಗಿ ಬುಧವಾರ ತಮ್ಮ ನಿವಾಸ ಕಾವೇರಿಯಲ್ಲಿ ಎಲ್ಲ ಸಚಿವ, ಶಾಸಕರು, ಸಂಬಂಧಿಕರಿಗೆ ಹಬ್ಬದೂಟ ಏರ್ಪಟಿಸಿದ್ದರು.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗುರುಗಳಾದ ಸಿದ್ದಪ್ಪಾಜಿ ಹಬ್ಬ ಆಚರಣೆ ಅಂಗವಾಗಿ ಬುಧವಾರ ತಮ್ಮ ನಿವಾಸ ಕಾವೇರಿಯಲ್ಲಿ ಎಲ್ಲ ಸಚಿವ, ಶಾಸಕರು, ಸಂಬಂಧಿಕರಿಗೆ ಹಬ್ಬದೂಟ ಏರ್ಪಟಿಸಿದ್ದರು.

ಪಕ್ಷಾತೀತವಾಗಿ ಎಲ್ಲ ಶಾಸಕನ್ನೂ ಮುಖ್ಯಮಂತ್ರಿ ಅವರು ಹಬ್ಬಕ್ಕೆ ಆಹ್ವಾನಿಸಿದ್ದರಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಅನೇಕ ಶಾಸಕರು ಕಾವೇರಿ ನಿವಾಸಕ್ಕೆ ಆಗಮಿಸಿ ಹಬ್ಬದೂಟ ಸವಿದರು.

ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಸಚಿವರಾದ ಟಿ.ಬಿ.ಜಯಚಂದ್ರ, ಎಚ್‌.ಆಂಜನೇಯ, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಬಸವರಾಜ ರಾಯರೆಡ್ಡಿ, ಶಾಸಕರಾದ ಮಾಲೀಕಯ್ಯ ಗುತ್ತೇದಾರ್‌, ಬೈರತಿ ಬಸವರಾಜು, ಅಶೋಕ್‌ ಖೇಣಿ, ಎನ್‌.ಎ.ಹ್ಯಾರಿಸ್‌, ಅಜಯ್‌ ಸಿಂಗ್‌, ಎಂ.ಟಿ.ಬಿ. ನಾಗರಾಜು, ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ ತಾರಾ ಅನುರಾಧ, ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, ಪುಟ್ಟಣ್ಣ ಸೇರಿದಂತೆ ಅನೇಕ ಶಾಸಕ, ಸಚಿವರು ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಗುರುಗಳಾದ ಸಿದ್ದಪ್ಪಾಜಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಅವರು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಬಳಿಕ ಬಂದ ಅತಿಥಿಗಳಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ರೀತಿಯ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರತೀ ವರ್ಷದಂತೆ ಈ ವರ್ಷವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗುರುಗಳಾದ ಸಿದ್ದಪ್ಪಾಜಿ ಅವರ ಹಬ್ಬಕ್ಕೆ ಎಲ್ಲ ಪಕ್ಷಗಳ ಶಾಸಕರನ್ನು ಆಹ್ವಾನಿಸಿದ್ದರು. ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಹಬ್ಬ ಆಯೋಜಿಸಲಾಗಿತ್ತು, ಸಿದ್ದಪ್ಪಾಜಿ ಅವರಿಗೆ ಪೂಜಾ ಕಾರ್ಯಕ್ರಮ, ಅತಿಥಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು.

- ತಾರಾ ಅನುರಾಧ, ಎಂಎಲ್‌ಸಿ

loader