ನವದೆಹಲಿ[ಆ.24]: ಅರುಣ್‌ ಜೇಟ್ಲಿ ಅವರಂತೆ ಅವರ ಮಾವ ಗಿರಿಧರ್‌ ಲಾಲ್‌ ಡೋಗ್ರಾ ಅವರು ಸಹ ಹಣಕಾಸು ಸಚಿವರಾಗಿದ್ದರು.

1952ರಿಂದ 1975ರ ವರೆಗೆ ಜಮ್ಮು- ಕಾಶ್ಮೀರ ವಿಧಾನಸಭೆಯ ಕಾಂಗ್ರೆಸ್‌ ಸದಸ್ಯರಾಗಿದ್ದ ಡೋಗ್ರಾ, 26 ಬಾರಿ ಜಮ್ಮು- ಕಾಶ್ಮೀರ ಹಣಕಾಸು ಬಜೆಟ್‌ ಅನ್ನು ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಅಲ್ಲದೇ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!

ಗಿರಿಧರ್‌ ಲಾಲ್‌ ಡೀಗ್ರಾ ಅವರ ಪುತ್ರಿ ಸಂಗೀತಾರನ್ನು ಜೇಟ್ಲಿ ವಿವಾಹವಾಗಿದ್ದರು. ವಿಶೇಷವೆಂದರೆ ಜೇಟ್ಲಿ ಅವರು ಕೂಡ ಮೋದಿ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿ ಸತತ 5 ಬಾರಿ ಬಜೆಟ್‌ ಮಂಡಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದಿಂದ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ಜೇಟ್ಲಿ ನಿಧನ ಇದೀಗ ಬಿಜೆಪಿ ಪಾಳಯಕ್ಕೆ ಆಘಾತ ನೀಡಿದೆ. ಸಮಸ್ಯೆಗೆ ಪರಿಹಾರ, ಹಾಗೂ ದೂರದೃಷ್ಟಿ ಆಲೋಚನೆ ಹೊಂದಿದ್ದ ಜೇಟ್ಲಿ, ಮೋದಿ ಸರ್ಕಾರದ ಬೆನ್ನೆಲುಬಾಗಿದ್ದರು. ಇದೀಗ ಸುಷ್ಮಾ ಸ್ವರಾಜ್ ಬೆನ್ನಲ್ಲೇ ಬೇಟ್ಲಿ ನಿಧನ ವಾರ್ತೆ ಬಿಜೆಪಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಜೇಟ್ಲಿ ನಿಧನ: ಕಣ್ಮರೆಯಾದ ಅತ್ಯುತ್ತಮ ಗೆಳೆಯನಿಗೆ ಗಣ್ಯರ ಸಂತಾಪ