ಈ ಗೆಲುವಿನ ಮೂಲಕ ಫಾರೂಕ್ ಅಬ್ದುಲ್ಲಾ ಮೂರನೇ ಬಾರಿಗೆ ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ.
ಶ್ರೀನಗರ(ಏ.15): ಇತ್ತೀಚೆಗಷ್ಟೇ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಭರ್ಜರಿ ಜಯ ಸಾಧಿಸಿದ್ದಾರೆ.
ಇಂದು ನಡೆದ ಮತ ಎಣಿಕೆಯಲ್ಲಿ ಫಾರೂಕ್ ಅಬ್ದುಲ್ಲಾ ಅವರು ಆಡಳಿತರೂಢ ಪಿಡಿಪಿ ಅಭ್ಯರ್ಥಿ ನಜೀರ್ ಖಾನ್ ಅವರನ್ನು 10,700 ಮತಗಳ ಅಂತರಗಳಿಂದ ಮಣಿಸಿದ್ದಾರೆ. ಈ ಗೆಲುವಿನ ಮೂಲಕ ಫಾರೂಕ್ ಅಬ್ದುಲ್ಲಾ ಮೂರನೇ ಬಾರಿಗೆ ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ. ಈ ಮೊದಲು 1980 ಹಾಗೂ 2009ರಲ್ಲಿ ಸಂಸತ್ತು ಪ್ರವೇಶಿಸಿದ್ದರು.
ಕಳೆದ ವರ್ಷ ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ, ಪಿಡಿಪಿ ಪಕ್ಷದ ಸಂಸದ ತಾರೀಕ್ ಹಮೀದ್ ಕಾರ್ರಾ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಹೀಗಾಗಿ ಶ್ರೀನಗರ ಕ್ಷೇತ್ರಕ್ಕೆ ಉಪಚುನಾವಣೆ ಅನಿರೀಕ್ಷಿತವಾಗಿ ಎದುರಾಗಿತ್ತು.
