ಬಳ್ಳಾರಿ [ಜು. 28]: ಅತೃಪ್ತರಾಗಿ ರಾಜೀನಾಮೆ ನೀಡಿ ತೆರಳಿದ್ದ  ಹೊಸಪೇಟೆ ಶಾಸಕ ಆನಂದ್ ಸಿಂಗ್ ಅನರ್ಹ ಮಾಡಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಿಮ್ಮ ಹಿಂದೆ ನಾವಿದ್ದೇವೆ ಎಂದು ಹೇಳಿದ್ದು, ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅನರ್ಹತೆ ನಿರ್ಧಾರ ಕೈಗೊಂಡ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆನಂದ್ ಸಿಂಗ್ ರಾಜೀನಾಮೆ ಕೊಟ್ಟು ಮನೆಯಲ್ಲಿದ್ದಾರೆ. ಬೇರೆ ಶಾಸಕರಂತೆ ಅವರು ರೆಸಾರ್ಟ್ ಅಥವಾ ಮುಂಬೈಗೆ ತೆರಳಿಲ್ಲ. ಆನಂದ್ ಸಿಂಗ್ ಅನರ್ಹ ಮಾಡುವ ಮುನ್ನ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಗರಂ ಆಗಿದ್ದಾರೆ. 

ತಮ್ಮನ್ನು ಮಾರಿಕೊಳ್ಳುವ ಸಂಸ್ಕೃತಿಗೆ ಸ್ಪೀಕರ್ ತೀರ್ಪು ಇತಿಶ್ರೀ ಹಾಡಲಿದೆ: ಸಿದ್ದರಾಮಯ್ಯ

ವಿಜಯನಗರ ಕ್ಷೇತ್ರಕ್ಕೆ ಮತ್ತೆ ಆನಂದ್ ಸಿಂಗ್ ಬೇಕೆ ಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.