ಮನೆಗೆ ಸಂಬಂಧಿಸಿದಂತೆ ರೇಣುಕಾ ಚವ್ಹಾಣ್ ಹಾಗೂ ರವಿ ಲಮಾಣಿ ಮಧ್ಯೆ ವಿವಾದವಿತ್ತು. ಕೋರ್ಟ್ ತೀರ್ಪಿನ ಪ್ರಕಾರ ರೇಣುಕಾ ಅವರು ಮನೆ ಖಾಲಿ ಮಾಡಿಕೊಡಬೇಕಿತ್ತು. ರೇಣುಕಾ ಅವರ ಸಾಮಾನುಗಳನ್ನು ತೆರವುಗೊಳಿಸಿ ಬೀಗ ಹಾಕುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿತ್ತು.
ಬಾಗಲಕೋಟೆ (ಫೆ.17): ನ್ಯಾಯಾಲಯ ನೀಡಿದ ಆದೇಶಕ್ಕೆ ಕುಟುಂಬವೊಂದು ಬೀದಿಗೆ ಬಿದ್ದ ಘಟನೆ ಬಾಗಲಕೋಟೆ ನಗರದ ದುರ್ಗಾವಿಹಾರದ ಬಳಿ ನಡೆದಿದೆ.
ಕಳೆದ ನಲವತ್ತು ವರ್ಷಗಳಿಂದ ಮನೆಯಲ್ಲಿ ವಾಸವಾಗಿದ್ದ ರೇಣುಕಾ ಚವ್ಹಾಣ್ ಎಂಬವರ ಕುಟುಂಬ ಬೀದಿಪಾಲಾಗಿದೆ.
ಮನೆಗೆ ಸಂಬಂಧಿಸಿದಂತೆ ರೇಣುಕಾ ಚವ್ಹಾಣ್ ಹಾಗೂ ರವಿ ಲಮಾಣಿ ಮಧ್ಯೆ ವಿವಾದವಿತ್ತು. ಕೋರ್ಟ್ ತೀರ್ಪಿನ ಪ್ರಕಾರ ರೇಣುಕಾ ಅವರು ಮನೆ ಖಾಲಿ ಮಾಡಿಕೊಡಬೇಕಿತ್ತು. ರೇಣುಕಾ ಅವರ ಸಾಮಾನುಗಳನ್ನು ತೆರವುಗೊಳಿಸಿ ಬೀಗ ಹಾಕುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿತ್ತು.
ಹೀಗಾಗಿ ನ್ಯಾಯಾಲಯದ ಆದೇಶದಂತೆ ಪೊಲೀಸರು ನಿನ್ನೆ ರಾತ್ರಿ ಮನೆ ಖಾಲಿ ಮಾಡಿಸಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಹೊರ ಹಾಕಿದ್ದಾರೆ. ಇದರಿಂದಾಗಿ ಕುಟುಂಬದ ಮಕ್ಕಳು, ಮಹಿಳೆಯರೆಲ್ಲ ರಾತ್ರಿಯೆಲ್ಲ ಮನೆ ಹೊರಗೇ ಜಾಗರಣೆ ಮಾಡುತ್ತಾ, ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.