Asianet Suvarna News Asianet Suvarna News

ಪಕ್ಕದ್ಮನೆ ನಾಯಿಯೊಂದಿಗೆ ಅನೈತಿಕ ಸಂಬಂಧ, ಮನೆಯಿಂದಲೇ  ಶ್ವಾನ ಔಟ್

ಅಕ್ರಮ ಸಂಬಂಧದ ವಿಚಾಗರಗಳು ಬಂದಾಗ ಮಾನವ ಪೊಲೀಸರ ಮೊರೆಯನ್ನೋ, ನ್ಯಾಯಾಲಯದ ಮೊರೆಯನ್ನೋ ಹೋಗುತ್ತಾನೆ. ಇದೇ ವಿಚಾರ ಪ್ರಾಣಿಗಳಿಗೆ ಅನ್ವಯವಾಗುತ್ತಾ? ಪಕ್ಕದ ಮನೆಯ ನಾಯಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯದಲ್ಲಿ ತೊಡಗಿದ್ದ ನಾಯಿ ತನ್ನ ಮನೆಯಿಂದ ಮಾಲೀಕನ ಕೆಂಗಣ್ಣಿಗೆ ಗುರಿಯಾಗಿ ಹೊರಹಾಕಲ್ಪಟ್ಟಿದೆ.

Family abandons pet Pomeranian over illicit relationship with neighbourhood dog
Author
Bengaluru, First Published Jul 23, 2019, 4:18 PM IST
  • Facebook
  • Twitter
  • Whatsapp

ತಿರುವನಂತಪುರ(ಜು. 23) ನೆರೆಮನೆಯ ನಾಯಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯದಲ್ಲಿದ್ದ ನಾಯಿ ಮಾಲೀಕನ ಸಿಟ್ಟಿಗೆ ಗುರಿಯಾಗಿ ಮನೆಯಿಂದ ಹೊರಹಾಕಲ್ಪಟ್ಟಿದೆ.

ತಿರುವನಂತಪುರದ ಚೆಕಾಯ್ ಪ್ರದೇಶದ ಮಾರುಕಟ್ಟೆಯಲ್ಲಿ ಪತ್ತೆಯಾದ ನಾಯಿಯ ಕುತ್ತಿಗೆಗೊಂದು ಪಟ್ಟಿಯನ್ನು ಹಾಕಿದ್ದು ಒಕ್ಕಣೆ ಬರೆಯಲಾಗಿದೆ. ನಾಯಿ ಪೋಟೋ ಮತ್ತು ಬರವಂಣಿಯನ್ನು ಶ್ರೀದೇವಿ ಎಸ್ ಕರ್ಥ ಎಂಬುವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮಾಲೀಕ ಜೈಲಿಗೆ: ಠಾಣೆಯೇ ಮನೆಯಾಯ್ತು ಈ ನಾಯಿಗೆ!

ಈ ನಾಯಿ ತುಂಬಾ ಒಳ್ಳೆಯದು. ಕಡಿಮೆ ಆಹಾರ ತೆಗೆದುಕೊಳ್ಳುತ್ತದೆ. ಯಾರಿಗೂ ಇಲ್ಲಿಯವರೆಗೆ ಕಚ್ಚಿಲ್ಲ. ಬೊಗಳುವ ಹವ್ಯಾಸ ಇಟ್ಟುಕೊಂಡಿದೆ. ಐದು ದಿನಕ್ಕೊಮ್ಮೆ ಸ್ನಾನ ಮಾಡಿಸಲಾಗುತ್ತಿತ್ತು ಎಂದು ಮುಂದಾಗಿ ದಿನಚರಿಯನ್ನು ಬರೆದು ಕುತ್ತಿಗೆ ಪಟ್ಟಿಗೆ ಹಾಕಲಾಗಿದೆ.

ಪೊಮೇರಿಯನ್ ನಾಯಿಯ ಫೋಟೋ ಹಾಗೂ ಫೋಟೋವನ್ನು ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


 

Follow Us:
Download App:
  • android
  • ios