Asianet Suvarna News Asianet Suvarna News

(ಸುಳ್ ಸುದ್ದಿ) ಇನ್ನುಮುಂದೆ ನಿಮ್ಮ ಆಧಾರ್ ಸಂಖ್ಯೆಯೇ ನಿಮ್ಮ ಮೊಬೈಲ್ ನಂಬರ್

ಈಗಾಗಲೇ ಆಧಾರ್ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಇದೀಗ ಆಧಾರ್ ಸಂಖ್ಯೆಯ ನಿಮ್ಮ ಮೊಬೈಲ್ ಸಂಖ್ಯೆ ಎಂದು ಹೇಳಲಾಗಿದೆ. 

Faking News Your Aadhaar Number Is Your Mobile Number
Author
Bengaluru, First Published Sep 27, 2018, 11:21 AM IST
  • Facebook
  • Twitter
  • Whatsapp

ಬೆಂಗಳೂರು : ಮೊಬೈಲ್ ಸಿಮ್‌ಗೆ ಆಧಾರ್ ಲಿಂಕ್ ಮಾಡದಂತೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ. ಹೀಗಾಗಿ ಇನ್ನುಮುಂದೆ ಆಧಾರ್ ನಂಬರ್ ಅನ್ನೇ ಮೊಬೈಲ್ ನಂಬರ್ ಆಗಿ ಟೆಲಿಕಾಂ ಕಂಪನಿಗಳು ಬಳಕೆ ಮಾಡಿಕೊಳ್ಳಲಿವೆ. ಸಿಮ್ ನೀಡುವಾಗ ಅದಕ್ಕೆ ಯಾವುದೇ ನಂಬರ್ ಇರುವುದಿಲ್ಲ. 

ಆಧಾರ್ ಬಯೋಮೆಟ್ರಿಕ್  ನೀಡುತ್ತಿದ್ದಂತೆ ನಿಮ್ಮ ಆಧಾರ್ ಸಂಖ್ಯೆಯೇ ಮೊಬೈಲ್ ನಂಬರ್ ಆಗಿ ಬಳಕೆಯಾಗಲಿದೆ.

ಇದರಿಂದ ಇನ್ನೊಂದು ಪ್ರಯೋಜನವೆಂದರೆ ಇಷ್ಟು ದಿನ ಆಧಾರ್ ಕಾರ್ಡ್ ನೀಡುತ್ತಿದ್ದ ಕಡೆ ಮಿಸ್ ಕಾಲ್ ಅಥವಾ ನಿಮ್ಮ ಫೋನ್ ನಂಬರ್ ನೀಡಿದರೆ ಸಾಕು. ಬ್ಯಾಂಕ್ ಖಾತೆ ತೆರೆಯಲೂ ಮೊಬೈಲ್ ನಂಬರ್ ಅಷ್ಟೇ ಸಾಕು ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios