ಎಚ್.ಡಿ ದೇವೇಗೌಡರ ಶಿಷ್ಯತ್ವ ಸ್ವೀಕಾರ ಮಾಡುತ್ತಿದ್ದಾರೆ ಈ ವ್ಯಕ್ತಿ..! ಅವರ್ಯಾರು..?

First Published 23, Jun 2018, 12:36 PM IST
Faking News HD Devegowda Become Yoga Teacher
Highlights

ಕರ್ನಾಟಕದ ಹಿರಿಯ ರಾಜಕಾರಣಿ ಜೆಡಿಎಸ್ ಮುಖಂಡರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಶಿಷ್ಯತ್ವ ಸ್ವೀಕಾರ ಮಾಡಲು ಇದೀಗ ದೇಶದ ಪ್ರಮುಖ ವ್ಯಕ್ತಿಯೋರ್ವರು ಮುಂದಾಗಿದ್ದಾರೆ.

ಸುಳ್ಳು ಸುದ್ದಿ

ಬೆಂಗಳೂರು :  ಯೋಗ ಗುರು ಎಂದೇ ಹೆಸರಾಗಿರುವ ಬಾಬಾ ರಾಮದೇವ್ ಅವರು ದೇವೇಗೌಡರ ಯೋಗ ಸಾಧನೆಗೆ ಮನಸೋತಿದ್ದಾರೆ. ಹೀಗಾಗಿ ತಮ್ಮನ್ನು ಶಿಷ್ಯನಾಗಿ ಸ್ವೀಕರಿಸುವಂತೆ ದೇವೇಗೌಡರನ್ನು ಕೇಳಿಕೊಂಡಿದ್ದಾರೆ. ನಾಳೆಯಿಂದ ಮುಂಜಾನೆ ಯೋಗ ಮಾಡುವಾಗ ನನಗೂ ನಿಮ್ಮ ಯೋಗ ಸಾಧನೆಯನ್ನು ಕಲಿಸಿಕೊಡಿ. 

ನಿಮಗೆ ಹೋಲಿಸಿದರೆ ನಾನು ನಾನು ಕಲಿತಿದ್ದು ಏನೇನೂ  ಅಲ್ಲ. ಅದರಲ್ಲೂ ನೀವು ಮೊನ್ನೆ ಯೋಗ ಸಾಧನೆಯ ವಿಡಿಯೋ ಶೂಟ್ ಮಾಡಿದ್ದನ್ನು ನೋಡಿದ್ದೇನೆ. ನೀವು ಮಾಡುವ ಆಸನಗಳನ್ನು ನಾನು ಎಷ್ಟು ಪ್ರಯತ್ನಪಟ್ಟರೂ ಮಾಡಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ನಿಮ್ಮ ಬಳಿ ಶಿಷ್ಯತ್ವ ಅರಸಿ ಬಂದಿದ್ದೇನೆ ಎಂದು ರಾಮದೇವ್ ವಿನಂತಿಸಿಕೊಂಡಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

loader