ಬೆಂಗಳೂರು :  ಆಪರೇಷನ್‌ ಕಮಲದ ಮೂಲಕ ಬಿಜೆಪಿಯು ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ, ಪಕ್ಷಕ್ಕೆ ಬರುವ ಪ್ರತಿ ಶಾಸಕರಿಗೆ 25 ಕೋಟಿ ರು. ಹಣ, ಚುನಾವಣಾ ಖರ್ಚು ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಆದರೆ, ತಮಗೆ ಕೇವಲ 25 ಕೋಟಿ ನೀಡಲಾಗುತ್ತಿದೆ ಎಂಬ ಸುದ್ದಿ ಪ್ರಕಟವಾಗುತ್ತಿರುವುದಕ್ಕೆ ಕೆಲ ಶಾಸಕರು ಬೇಸರ ಮಾಡಿಕೊಂಡಿದ್ದಾರೆ. 

ನಮ್ಮ ಬೆಲೆ ಕೇವಲ 25 ಕೋಟಿಯೇ? ಕೊಡುವುದು ಎಷ್ಟಾದರೂ ಕೊಡಲಿ, ಆದರೆ ಕನಿಷ್ಠ ಪಕ್ಷ ಮಾಧ್ಯಮದಲ್ಲಾದರೂ 50 ಅಥವಾ 75 ಕೋಟಿ ಎಂದು ಸುದ್ದಿ ಪ್ರಕಟವಾಗುವಂತೆ ಮಾಡಲಿ ಎಂದು ಶಾಸಕರು ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.