ಕೆಲವರು ಸಮಸ್ಯೆ ಸೃಷ್ಟಿಗಾಗಿಯೇ ಇಂಥ ಕೃತ್ಯಗಳನ್ನು ಮಾಡುತ್ತಾರೆ. ಪ್ರಕರಣದ ತನಿಖೆ ಬಳಿಕವಷ್ಟೇ ಈ ಬಗ್ಗೆ ಹೇಳಲು ಸಾಧ್ಯ

ನವದೆಹಲಿ(ಫೆ.23): ದೆಹಲಿಯ ಎಸ್‌'ಬಿಐ ಎಟಿಎಂ ಒಂದರಿಂದ ₹2,000 ಮುಖಬೆಲೆಯ ನಕಲಿ ನೋಟುಗಳು ಹೊರ ಬಂದಿವೆ ಎಂಬ ವರದಿಗಳ ಬಗ್ಗೆ ಸರ್ಕಾರ ತನಿಖೆ ಕೈಗೊಳ್ಳಲಿದೆ. ಅಲ್ಲದೆ, ನೂತನ ಮುಖಬೆಲೆ ನೋಟುಗಳ ನಕಲಿ ಮಾಡುವುದರ ತಡೆಗೆ ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವಾಲಯದ ಸಹಾಯಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಮಾತನಾಡಿದ ಅವರು, ‘ದಕ್ಷಿಣ ದೆಹಲಿಯ ಸಂಗಮ್ ವಿಹಾರದ ಎಸ್‌'ಬಿಐ ಎಟಿಎಂನಲ್ಲಿ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿತವಾದ ₹2,000 ಮುಖಬೆಲೆ ನೋಟುಗಳು ಪೂರೈಕೆಯಾಗಿವೆ ಎಂಬ ಚಿಲ್ಲರೆ ಪ್ರಕರಣಗಳ ಬಗ್ಗೆ ಸರ್ಕಾರ ವಿಚಲಿತವಾಗುವುದಿಲ್ಲ,’ ಎಂದಿದ್ದಾರೆ.

ಎಟಿಎಂನಿಂದ ಖೋಟಾ ನೋಟು ಬರಲು ಸಾಧ್ಯವೇ ಇಲ್ಲ. ಆದರೆ, ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಯಾಗಿದ್ದರೆ ತನಿಖೆ ಕೈಗೊಳ್ಳಲಾಗುತ್ತದೆ,’ ಎಂಬುದಾಗಿ ಅವರು ತಿಳಿಸಿದ್ದಾರೆ. ಕೆಲವರು ಸಮಸ್ಯೆ ಸೃಷ್ಟಿಗಾಗಿಯೇ ಇಂಥ ಕೃತ್ಯಗಳನ್ನು ಮಾಡುತ್ತಾರೆ. ಪ್ರಕರಣದ ತನಿಖೆ ಬಳಿಕವಷ್ಟೇ ಈ ಬಗ್ಗೆ ಹೇಳಲು ಸಾಧ್ಯ ಎಂದು ತಿಳಿಸಿದ್ದಾರೆ.