ಕಳೆದ 12 ತಿಂಗಳಲ್ಲಿ ಫೇಕ್ ನ್ಯೂಸ್ ಪದ ಬಳಕೆ ಶೇ.365ರಷ್ಟು ಏರಿಕೆಯಾಗಿದ್ದನ್ನು ಬ್ರಿಟನ್ ನಿಘಂಟು ರಚನೆಕಾರ ಕಂಡುಕೊಂಡಿದ್ದಾರೆ

ನಂಬಿದ್ರೆ-ನಂಬಿ, ಬಿಟ್ರೆ-ಬಿಡಿ ‘ಫೇಕ್ ನ್ಯೂಸ್’, ಕೊಲಿನ್ಸ್ ಡಿಕ್ಷನರಿಯಲ್ಲಿ ಪ್ರಸ್ತುತ ವರ್ಷದ ಪದ ಎಂಬ ಗೌರವಕ್ಕೆ ಪಾತ್ರವಾಗಿದೆ. ಕಳೆದ ವರ್ಷದ ಅಮೆರಿಕ ಅಧ್ಯಕ್ಷೀಯ ಎಲೆಕ್ಷನ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರು, ಮಾಧ್ಯಮಗಳ ವಿರುದ್ಧ ಹರಿಹಾಯಲು ಬಳಸುತ್ತಿದ್ದ ‘ಫೇಕ್‌ನ್ಯೂಸ್’ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿತ್ತು. ಅಲ್ಲದೆ, ಕಳೆದ 12 ತಿಂಗಳಲ್ಲಿ ಫೇಕ್ ನ್ಯೂಸ್ ಪದ ಬಳಕೆ ಶೇ.365ರಷ್ಟು ಏರಿಕೆಯಾಗಿದ್ದನ್ನು ಬ್ರಿಟನ್ ನಿಘಂಟು ರಚನೆಕಾರ ಕಂಡುಕೊಂಡಿದ್ದಾರೆ. ಹಾಗಾಗಿ, ಫೇಕ್‌ನ್ಯೂಸ್‌ಗೆ ಈ ಗೌರವ ನೀಡಲಾಗಿದೆಯಂತೆ. ಕಳೆದ ವರ್ಷ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಸಂದರ್ಭದಲ್ಲಿ ಹೆಚ್ಚು ಬಳಕೆಯಾಗಿದ್ದ ಡೆಫಿನೇಟಿವ್(ನಿರ್ಣಾಯಕ) ವರ್ಷದ ಪದ ಎಂಬ ಗೌರವ ಮುಡಿಗೇರಿಸಿಕೊಂಡಿತ್ತು.