ದಿನ ದಿನಕ್ಕೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ಜನತೆ ಕಂಗಾಲಾಗಿದ್ದು ಇದೀಗ ಹಬ್ಬದ ಪ್ರಯುಕ್ತ 10ರು.ಗೆ 1 ಲೀಟರ್ ಪೆಟ್ರೋಲ್ ನೀಡಲು ಸರ್ಕಾರ ಮುಂದಾಗಿದೆ.
ಬೆಂಗಳೂರು : ಹೋಟೆಲ್‌ಗಳಲ್ಲಿ ಊಟ ತಿಂಡಿಯ ದರಗಳು ಗಗನಕ್ಕೆ ಏರಿದ ಸಂದರ್ಭದಲ್ಲಿ ಕೇವಲ 10 ರು.ಗೆ ಊಟ ನೀಡಿ ಭಾರೀ ಜನಮೆಚ್ಚುಗೆ ಗಳಿಸಿರುವ ಇಂದಿರಾ ಹಾಗೂ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಕೂಡ ಕಡಿಮೆ ದರಕ್ಕೆ ವಿತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಒಂದು ವಾರದ ಮಟ್ಟಿಗೆ ಪೆಟ್ರೊಲ್ ಮತ್ತು ಡೀಸೆಲ್‌ಗಳನ್ನು ಲೀಟರ್‌ಗೆ 10 ರು.ಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.
ಕ್ಯಾಂಟೀನ್‌ನಲ್ಲಿ ಊಟ ಮಾಡುವ 100 ಮಂದಿ ಅದೃಷ್ಟಶಾಲಿಗಳನ್ನು ಗುರುತಿಸಿ ಅಗ್ಗದ ದರಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ವಿತರಿಸಲಾಗುತ್ತದೆ. ಹೀಗಾಗಿ ಕ್ಯಾಂಟೀನ್‌ಗೆ ಜನಸಾಗರವೇ ಹರಿದುಬರುತ್ತಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.
![[ಸುಳ್ ಸುದ್ದಿ] ಹಬ್ಬದ ಪ್ರಯುಕ್ತ 10 ರು.ಗೆ 1ಲೀ. ಪೆಟ್ರೋಲ್ ? [ಸುಳ್ ಸುದ್ದಿ] ಹಬ್ಬದ ಪ್ರಯುಕ್ತ 10 ರು.ಗೆ 1ಲೀ. ಪೆಟ್ರೋಲ್ ?](https://static.asianetnews.com/images/w-1280,h-720,imgid-01cq37z7f8ms98mftn2vaewrgb,imgname-petrol.jpg)