ಕೋಲ್ಕತಾ (ಮೇ. 07): ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದರೂ ಮಮತಾ ಬ್ಯಾನರ್ಜಿ ಮರಳಿ ಫೋನ್‌ ಮಾಡದೇ ಇರುವುದಕ್ಕೆ ಕಾರಣ ಏನು ಎಂಬುದು ಕೊನೆಗೂ ಬಹಿರಂಗಗೊಂಡಿದೆ.

ಮೋದಿ ಅವರು ತಮ್ಮ ಕಾಲರ್‌ ಟ್ಯೂನ್‌ ಅನ್ನು ಮೈ ಭೀ ಚೌಕೀದಾರ್‌ ಎಂದು ಬದಲಾಯಿಸಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಫೋನ್‌ ಮಾಡಿದಾಗ ಮೈ ಭಿ ಚೌಕೀದಾರ್‌ ಎಂಬ ಹಾಡು ಕೇಳಿದೆ. ಅದರಿಂದಾಗಿ ಮಮತಾ ಕೆಂಡಾಮಂಡಲಾರಾಗಿದ್ದಾರೆ. ಹೀಗಾಗಿ ಅವರು ಮತ್ತೆ ಫೋನ್‌ ಮಾಡುವ ಗೋಜಿಗೆ ಹೋಗಿಲ್ಲ. ಅಲ್ಲದೆ ಮೋದಿಯವರ ನಂಬರನ್ನು ಕೂಡ ಬ್ಲಾಕ್‌ ಮಾಡಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.