ಬೆಂಗಳೂರು(ನ.22): ಇತ್ತೀಚೆಗಷ್ಟೇ ನಕಲಿ IAS ಒಬ್ಬನ ಬಣ್ಣ ಬಯಲಾಗಿತ್ತು. ಇದೀಗ ಬೆಂಗಳೂರಿನಲ್ಲೂ ನಕಲಿ ಸಿಬಿಐ ಅಧಿಕಾರಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಿಬಿಐ ಎಂದು ಐಡಿ ಕಾರ್ಡ್ ತೋರಿಸಿ ಹೆದರಿಸುತ್ತಿದ್ದಾಗ ಸದ್ಯ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ.

ನಕಲಿ‌ ಸಿಬಿಐ ಆಫೀಸರ್‌ನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಮುಖ ಆರೋಪಿ ಅಭಿಲಾಷ್ ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಬಂಧಿತರಿಂದ ಒಂದು ಬಿಎಂಡಬ್ಲ್ಯೂ ,ಇನ್ನೋವ ಮತ್ತು ಬೆನ್ಜ್ ಕಾರುಗಳನ್ನು ವಶ ಪಡಿಸಲಾಗಿದೆ.

ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ!

ನಗರದ‌ ಸಿಬಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ನಕಲಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ವಂಚಕ ವ್ಯಕ್ತಿ ಜನರನ್ನ ಸಂಪರ್ಕಿಸಿ ಪರಿಚಯ ಮಾಡಿಕೊಳ್ಳುತ್ತಿದ್ದ. ಅವರ ಸ್ಥಿತಿಗತಿಯ ಬಗ್ಗೆ ತಿಳಿದು ಕೊಳ್ಳುತ್ತಿದ್ದ. ಬೇರೆ ಬೇರೆ ರೀತಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದೀರಾ ಎಂದು ತನಿಖಾಧಿಕಾರಿಯಂತೆ ಪ್ರಶ್ನಿಸಿ ಹೆದರಿಸುತ್ತಿದ್ದ.

ನಂತರ ತಾನು ಸಿಬಿಐ ಅಧಿಕಾರಿ ಎಂದು ಹೇಳಿ ವಂಚಿಸುತ್ತಿದ್ದ. ಅಭಿಲಾಷ್‌ಗೆ ರಾಘವ್ ರೆಡ್ಡಿ ಎಂಬ ಮತ್ತೊಬ್ಬ ಸಹಚರ ಸಹಾಯ ಮಾಡುತ್ತಿದ್ದ. ಆತನನ್ನು ಬಂಧಿಸಿದ್ದೇವೆ. ಅಭಿಲಾಷ್ ವಂಚನೆ, ಮೋಸ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದ. ಬೇರೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ಈತ ಮತ್ತಷ್ಟು ವಂಚನೆ ನಾಡಿರುವ ಸಾಧ್ಯತೆ ಇದೆ. ಮೋಸ ಹೋಗಿರುವ ವಿಜಯ ಕುಮಾರ್ ದೂರು ನೀಡಿದ್ದರು. ಅಭಿಲಾಷ್‌ನಿಂದ ಮೋಸ ಹೋದ ಜನ ಬಂದು ಸಿಸಿಬಿಗೆ ದೂರು ಕೊಡಬಹುದು. ವಿಜಯ್ ಕುಮಾರ್ 24 ಲಕ್ಷ ಹಣ ಕೊಟ್ಟಿದ್ದ. ಲೋನ್ ತೆಗೆದುಕೊಳ್ಳುವ ವಿಚಾರಣಕ್ಕೆ ಪರಿಚಯ ಮಾಡಿಕೊಂಡು ಮೋಸ ಮಾಡಿದ್ದ. ಪೈವ್ ಸ್ಟಾರ್ ಹೋಟೆಲ್ನಲ್ಲಿ ಮಾತುಕತೆ ನಡೆದಿತ್ತು. ಅಭಿಲಾಷ್‌ನ  ಐಡಿ ಕಾರ್ಡ್ಸ್ ನೋಡಿದಾಗ ಈತ ನಕಲಿ ಎಂಬುದು ಗೊತ್ತಾಗಿದೆ ಎಂದಿದ್ದಾರೆ.

ಅಸಲಿ ಕೆಎಎಸ್‌ ಅಧಿಕಾರಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌!

CCB ಪೊಲೀಸರು ನಕಲಿ CBI ಅಧಿಕಾರಿ ಬಂಧಿಸಿದ್ದು, ಅಭಿಲಾಷ್(30) ಬಂಧಿತ ನಕಲಿ‌ CBI ಅಧಿಕಾರಿ. ಶ್ರೀಮಂತರಿಗೆ ಕರೆ ಮಾಡಿ ತಾನೊಬ್ಬ CBI ಅಧಿಕಾರಿ ಅಂತ ಹೇಳಿಕೊಂಡಿದ್ದ. ಬ್ಲಾಕ್ ಮೇಲ್ ಮಾಡಿ‌ ಜನರಿಂದ ಹಣ ಸುಲಿಗೆ ಮಾಡಿದ್ದ. ಹಣಕೊಡದೇ ಇದ್ದರೇ ಪ್ರಕರಣ ದಾಖಲಿಸಿಕೊಳ್ತಿನಿ ಅಂತ ಬೆದರಿಕೆ ಹಾಕುತ್ತಿದ್ದ. ಬಂಧಿತ ನಕಲಿ‌ CBI ಅಧಿಕಾರಿ ಅಭಿಲಾಷ್ ನಿಂದ 24 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಜೂಕಾಗಿ ಮಹಿಳೆಯರ ಮಾಂಗಲ್ಯ‌ ಸರ ಕದಿಯುತ್ತಿದ್ದ ಕಳ್ಳನ ಬಂಧನ