ಅಸಲಿ ಕೆಎಎಸ್‌ ಅಧಿಕಾರಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌!

ಐಎಎಸ್‌ ಅಧಿಕಾರಿ ಎಂದು ನಂಬಿಸಿ ವಂಚನೆ| ಸರ್ಕಾರಿ ವಸತಿ ಗೃಹವನ್ನು ದುರ್ಬಳಕೆ | ಅಸಲಿ ಕೆಎಎಎಸ್‌ ಅಧಿಕಾರಿ ಜಾಣ್ಮೆಯಿಂದ ನಕಲಿ ಐಎಎಸ್‌ ಅಧಿಕಾರಿ ಬಂಧನ| 

Fake IAS Officer Caught By Real KAS Officer At Ramnagar

ಚನ್ನಪಟ್ಟಣ[ನ.16]: ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಕ್ಮಲ್‌ ಟೋಪಿ ಹಾಕಲು ಹೋದ ನಕಲಿ ಐಎಎಸ್‌ ಅಧಿಕಾರಿಯೊಬ್ಬ, ಅಸಲಿ ಕೆಎಎಸ್‌ ಅಧಿಕಾರಿಯ ಸಮಪ್ರಜ್ಞೆಯಿಂದಾಗಿ ​ಪೊಲೀಸರ ಅತಿಥಿಯಾಗಿದ್ದಾನೆ.

ಐಎಎಸ್‌ ಅಧಿಕಾರಿ ಎಂದು ನಂಬಿಸಿ ವಂಚನೆ ಮಾಡಿರುವುದು, ಸರ್ಕಾರಿ ವಸತಿ ಗೃಹವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಇದೀಗ ರಹಸ್ಯ ಸ್ಥಳದಲ್ಲಿ ಸುದೀರ್ಘ ವಿಚಾರಣೆ ಕೈಗೊಂಡಿದ್ದಾರೆ.

ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್ ಇನ್ಸ್​ಪೆಕ್ಟರ್​ ಸಾವು

ತಾಲೂಕಿನ ಜಮೀನಿನ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ತಂದ ನಕಲಿ ಐಎಎಸ್‌ ಅಧಿಕಾರಿ, ಈತನ ಗನ್‌ಮ್ಯಾನ್‌, ಭೂಮಿಗೆ ಸಂಬಂಧಿಸಿದಂತೆ ಅರ್ಜಿ ನೀಡಿದ್ದ ವ್ಯಕ್ತಿ ಮತ್ತು ಈತನ ಸಹಾಯಕರನ್ನು ಪೊಲೀಸರು ವಶಕ್ಕೆ ಪಡೆದು ಡ್ರಿಲ್‌ ನಡೆ​ಸು​ತ್ತಿ​ದ್ದಾರೆ.

ಸಿಕ್ಕಿ​ಹಾ​ಕಿಕೊಂಡಿದ್ದು ಹೇಗೆ:

ತಾಲೂಕಿನ ಬೆಳಕೆರೆ ಗ್ರಾಮದ ಗೋಮಾಳದ ಜಮೀನಿನ ಸಂಬಂಧ ಸಾಕಷ್ಟುದಿನಗಳಿಂದ ವಿವಾದ ಇತ್ತು. ಈ ಸಂಬಂಧ ಅರ್ಜಿದಾರರು ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಲು ಈ ನಕಲಿ ಐಎಎಸ್‌ ಅಧಿಕಾರಿಯ ಮೊರೆ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಬೆಳಕೆರೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗೆ ಕರೆ ಮಾಡಿದ ಈತ ನಾನು ಮಹ್ಮದ್‌ ಸಲ್ಮಾನ್‌, ವಿಧಾನಸೌಧದಲ್ಲಿ ಐಎಎಸ್‌ ಅಧಿಕಾರಿ ಎಂದು ಗುರುತಿಸಿಕೊಂಡು ಈ ಜಮೀನಿನ ಸಂಬಂಧ ಪ್ರಶ್ನಿಸಿದ್ದಾನೆ.

ಬಳಿಕ ಮಂಗಳವಾರ ರಾತ್ರಿ, ಕರ್ನಾಟಕ ಸರ್ಕಾರ ಎಂದು ನಮೂದಿಸಿದ ಕಾರಿನಲ್ಲಿ ಗನ್‌ಮ್ಯಾನ್‌ ಜೊತೆಗೆ ಬಂದ ಈತ, ಪ್ರವಾಸಿಮಂದಿರಕ್ಕೆ ಬರುವಂತೆ ಕಂದಾಯ ಇಲಾಖೆ ರೆವಿನ್ಯೂ ಇನ್ಸ್‌ಪೆಕ್ಟರ್‌, ಗ್ರಾಮ ಲೆಕ್ಕಾಧಿಕಾರಿಗೆ ಕರೆ ಮಾಡಿದ್ದಾರೆ. ಇವರು ವಿಧಾನಸೌಧದ ಐಎಎಸ್‌ ಅಧಿಕಾರಿ ಎಂದು ನಂಬಿ ಕಡತದೊಂದಿಗೆ ದೌಡಾಯಿಸಿ ಪ್ರಕರಣದ ವಿವರಣೆ ನೀಡಿದ್ದಾರೆ. ಕೊನೆಗೆ ಇವರು ನಮಗೆ ಬೇಕಾದವರು ಇವರಿಗೆ ಕೆಲಸ ಮಾಡಿಕೊಡಿ ಎಂದಿದ್ದಾರೆ.

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

ಈ ಚರ್ಚೆ ನಡೆಯುತ್ತಿರಬೇಕಾದರೆ ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳಲು ತಹಸೀಲ್ದಾರ್‌ ಸುದರ್ಶನ್‌ ಸ್ಥಳಕ್ಕೆ ಆಗಮಿಸಿದ್ದಾರೆ. ತಮ್ಮ ಸಿಬ್ಬಂದಿ ಇರುವುದನ್ನು ಕಂಡು ವಿಚಾರಿಸಿದಾಗ ಐಎಎಸ್‌ ಅಧಿಕಾರಿ ಎಂದು ಹೇಳಿದ್ದಾರೆ. ಇದೇ ವೇಳೆಗೆ ಹೊರಗೆ ಬಂದ ನಕಲಿ ಐಎಎಸ್‌ ಅಧಿಕಾರಿ ತನ್ನ ಪರಿಚಯ ಮಾಡಿಕೊಂಡು ಜಮೀನಿನ ವಿವಾದದ ಬಗ್ಗೆ ಹೇಳಿ ಅನುಕೂಲ ಮಾಡಿಕೊಡಿ ಎಂದಿದ್ದಾರೆ.

ಈತನ ಬಗ್ಗೆ ಅನುಮಾನಗೊಂಡ ತಹಸೀಲ್ದಾರ್‌ ನೀವು ಯಾವ ಬ್ಯಾಚ್‌ ಅಧಿಕಾರಿ ಎಂದು ಪ್ರಶ್ನಿಸಿದ್ದಲ್ಲದೆ, ಗೂಗಲ್‌ನಲ್ಲಿ ಇವರ ಹೆಸರನ್ನು ಹುಡುಕಾಡಿದಾಗ ಕರ್ನಾಟಕದಲ್ಲಿ ಈ ಹೆಸರಿನ ಯಾವುದೇ ಐಎಎಸ್‌ ಅಧಿಕಾರಿ ಇಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಈ ವೇಳೆಗೆ ನಕಲಿ ಐಎಎಸ್‌ ಅಧಿಕಾರಿ ತನ್ನ ಗನ್‌ಮ್ಯಾನ್‌ ಹಾಗೂ ಇತರರೊಂದಿಗೆ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.

ಉಗ್ರರು ಸಿಕ್ಕ ರಾಮನಗರದಲ್ಲೀಗ ಬಾಂಗ್ಲಾತಂಕ!

ಸಾರಿ ಕೇಳಲು ಬಂದವ ಸರಳುಗಳ ಹಿಂದೆ:

ಈ ಬಗ್ಗೆ ಸಂದೇಹಗೊಂಡ ತಹಸೀಲ್ದಾರ್‌ ಸುದರ್ಶನ್‌ ಬುಧವಾರ ಅರ್ಜಿದಾರರನ್ನು ಕರೆಸಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಲೆಕ್ಕಾಧಿಕಾರಿಗೆ ಕರೆ ಮಾಡಿದ ನಕಲಿ ಐಎಎಸ್‌ ಅಧಿಕಾರಿ ಕ್ಷಮೆ ಕೋರಿದ್ದು, ಅರ್ಜಿದಾರರನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾನೆ. ನೀವು ನಮ್ಮ ಸಾಹೇಬರ ಬಳಿ ಬಂದು ಕ್ಷಮೆ ಕೇಳಿ. ಅವರು ಕೆಲಸ ಮಾಡಿಕೊಡುತ್ತಾರೆ ಎಂದು ಪುಸಲಾಯಿಸಿದ್ದಾರೆ.

ಅದರಂತೆ ಗುರುವಾರ ರಾತ್ರಿ ತಹಸೀಲ್ದಾರ್‌ ಅವರ ಬಳಿ ಬಂದಾಗ ಅವರ ಜೊತೆ ಜಾಣ್ಮೆಯಿಂದ ಮಾತನಾಡುತ್ತಲೇ ತಹಸೀಲ್ದಾರ್‌ ನಕಲಿ ಐಎಎಸ್‌ ಅಧಿಕಾರಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಕರ್ನಾಟಕ ಸರ್ಕಾರ ಎಂದು ಬರೆದುಕೊಂಡಿರುವ ಇನ್ನೋವಾ ಕಾರನ್ನು ಬಳಕೆ ಮಾಡುತ್ತಿದ್ದು, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುಟ್ಟು ಬಿಟ್ಟುಕೊಡದ ಪೊಲೀಸರು:

ವಶಕ್ಕೆ ಪಡೆದಿರುವ ನಕಲಿ ಐಎಎಸ್‌ ಅಧಿಕಾರಿಯನ್ನು ಎಎಸ್ಪಿ ರಾಮರಾಜನ್‌ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ರಹಸ್ಯ ಸ್ಥಳದಲ್ಲಿ ಸುದೀರ್ಘ ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸರು ಬಿಟ್ಟು ಕೊಟ್ಟಿಲ್ಲ. ಈತ ಯಾವ ಉದ್ದೇಶಕ್ಕೆ ಈ ರೀತಿ ಮಾಡಿದ್ದಾನೆ. ಇದಲ್ಲದೆ ಬೇರೆ ಎಲ್ಲಾದರೂ ಇದೇ ರೀತಿ ಪ್ರಕರಣ ನಡೆದಿದೆಯೇ ಎಂಬಿತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕನಕಪುರ ಕ್ಷೇತ್ರ ಕೈ ವಶ : ಡಿಕೆಶಿ ಸಹೋದರರಿಗೆ ಒಲಿದ ಭರ್ಜರಿ ಜಯ

Latest Videos
Follow Us:
Download App:
  • android
  • ios