Asianet Suvarna News Asianet Suvarna News

Fact Check: ಉತ್ತರ ಪ್ರದೇಶವನ್ನು ಒಡೆದು ಮೂರು ಭಾಗ ಮಾಡಲಾಗುತ್ತಾ?

ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact check of Uttar Pradesh trifurcation due to easy administration
Author
Bengaluru, First Published Sep 25, 2019, 12:31 PM IST

ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯಾವ ಜಿಲ್ಲೆಗಳು ಯಾವ ರಾಜ್ಯಕ್ಕೆ ಸೇರಿವೆ ಎಂಬ ವಿವರವನ್ನು ಒಳಗೊಂಡ ಫೋಟೋದೊಂದಿಗೆ, ‘ಉತ್ತರ ಪ್ರದೇಶ ಮೂರು ಭಾಗವಾಗಲಿದೆ.

Fact Check: ಕಾಶ್ಮೀರದ ಕಾಡುನಾಶ ಮಾಡಿ, ಪೀಠೋಪಕರಣ ಮಾಡಿಸಿದ್ರಾ ಓಮರ್‌ ಅಬ್ದುಲ್ಲಾ?

ಮೊದಲ ರಾಜ್ಯ ಉತ್ತರ ಪ್ರದೇಶ ಅದರ ರಾಜಧಾನಿ ಲಖನೌ. ಎರಡನೇ ರಾಜ್ಯ ಬುಂದೇಲ್‌ಖಂಡ್, ಅದರ ರಾಜಧಾನಿ ಪ್ರಯಾಗ್‌ರಾಜ್. ಮೂರನೇ ರಾಜ್ಯ ಪೂರ್ವಾಂಚಲ್, ಅದರ ರಾಜಧಾನಿ ಗೋರಖ್‌ಪುರ ಎಂದು ಹೇಳಲಾಗಿದೆ. ಶಿವರಾಜ್ ವಿಶ್ವಕರ್ಮ ಎಂಬವರು ತಮ್ಮ ಟ್ವೀಟರ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ವೈರಲ್ ಆಗುತ್ತಿದೆ.

Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?

ಆದರೆ ನಿಜಕ್ಕೂ ಉತ್ತರ ಪ್ರದೇಶ ಮೂರು ಭಾಗವಾಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ನ್ಯೂಸ್ ಈ ಬಗ್ಗೆ ಹುಡುಕಹೊರಟಾಗ ಉತ್ತರ ಪ್ರದೇಶವನ್ನು ಮೂರು ಭಾಗ ಮಾಡುವ ಯಾವುದೇ ಪ್ರಸ್ತಾಪಗಳ ಬಗ್ಗೆಯೂ ವರದಿ ಲಭ್ಯವಾಗಿಲ್ಲ.

ಯುಪಿಯನ್ನು ಹಲವು ಭಾಗ ಮಾಡುವ ಮೊದಲ ಪ್ರಸ್ತಾಪ ಕೇಳಿಬಂದಿದ್ದು 2011 ರಲ್ಲಿ. ಆಗ ಬಿಎಸ್‌ಪಿ ಸರ್ಕಾರವಿತ್ತು. ರಾಜ್ಯ ವಿಧಾನಸಭೆಯಲ್ಲಿ ಇಂಥದ್ದೊಂದು ಪ್ರಸ್ತಾಪ ಮಾಡಿ, ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಆಗಿನ ಯುಪಿಎ ಸರ್ಕಾರ ಇದಕ್ಕೆ ಸಮ್ಮತಿ ನೀಡಿರಲಿಲ್ಲ. 2013 ರಲ್ಲಿಯೂ ಇಂಥದ್ದೊಂದು ಪ್ರಸ್ತಾಪ ಮತ್ತೆ ಕೇಳಿ ಬಂದಿತ್ತು. ಅಲ್ಲದೆ ಈ ಬಗ್ಗೆ ಯುಪಿ ಸರ್ಕಾರದ ಮಾಧ್ಯಮ ಸಲಹೆಗಾರರೊಬ್ಬರು ಸ್ಪಷ್ಟನೆ ನೀಡಿ ‘ಯುಪಿಯನ್ನು ಒಡೆಯುವ ಯಾವ ಪ್ರಸ್ತಾಪವೂ ಇಲ್ಲ . ಇದೊಂದು ಸುಳ್ಳುಸುದ್ದಿ ಎಂದಿದ್ದಾರೆ. 

Follow Us:
Download App:
  • android
  • ios