ಎಚ್ಚರ! ನೀವು ಹಿಂದು, ಮುಸ್ಲಿಂ ಅಂತ ಕಿತ್ತಾಡುತ್ತಿರಿ. ಅಲ್ಲಿ ನೀವು ಬ್ಯಾಂಕ್‌ ಖಾತೆಯಲ್ಲಿಟ್ಟಹಣವನ್ನೆಲ್ಲ ಸರ್ಕಾರ ಜಪ್ತಿ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಕಾಯ್ದೆ ತರಲು ಕೇಂದ್ರ ಸರ್ಕಾರ ಮೆತ್ತಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನೀವು ಠೇವಣಿ ಇರಿಸಿದ ಹಣವನ್ನೆಲ್ಲ ತೆಗೆದುಕೊಂಡು ಮೋದಿ ಸೈಲೆಂಟಾಗಿ ಓಡಿಹೋಗ್ತಾರೆ. ಕೋಟಿಗಟ್ಟಲೆ ಸಾಲ ಪಡೆದು ಬ್ಯಾಂಕಿಗೆ ಮರುಪಾವತಿ ಮಾಡದೆ ಮೋದಿಯವರ ಸ್ನೇಹಿತರು ಪರಾರಿಯಾದ ತಪ್ಪಿಗೆ ನಿಮ್ಮ ಹಣ ಜಪ್ತಿ ಮಾಡಿಕೊಂಡು ಬ್ಯಾಂಕುಗಳಿಗೆ ನೀಡಲು ಸರ್ಕಾರ ಮುಂದಾಗಿದೆ.

Fact Check: ಬಿಕಿನಿ ಯುವತಿಯರ ಜೊತೆ ಟ್ರಂಪ್ ಅಸಭ್ಯವಾಗಿ ವರ್ತಿಸಿದ್ರಾ?

ಹೀಗೊಂದು ಸಂದೇಶವಿರುವ ವಿಡಿಯೋ ಫೇಸ್‌ಬುಕ್‌ನಲ್ಲಿ ಸೆ.29ರಿಂದ ಓಡಾಡುತ್ತಿದೆ. ಚಕಿಯಾ ಎಕ್ಸ್‌ಪ್ರೆಸ್‌ ಎಂಬ ಖಾತೆಯಿಂದ ಇದು ಅಪ್ಲೋಡ್‌ ಆಗಿದೆ. ಕೇಂದ್ರ ಸರ್ಕಾರವು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಿವಾದಿತ ಎಫ್‌ಆರ್‌ಡಿಐ ಮಸೂದೆ ಮಂಡನೆ ಮಾಡಲು ನಿರ್ಧರಿಸಿದೆ ಎಂಬುದು ಈ ವಿಡಿಯೋದ ಸಾರಾಂಶ. ಈ ಮಸೂದೆಯಡಿ, ಒಂದು ಮಿತಿಗಿಂತ ಹೆಚ್ಚು ಹಣವನ್ನು ಹೊಂದಿರುವವರ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿ, ಹಣವನ್ನು ಜನಕಲ್ಯಾಣಕ್ಕೆ ಬಳಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ.

Fact Check: ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

ಆದರೆ, ಇದು ನಿಜವೇ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ ತಂಡ ಪರಿಶೀಲಿಸಿದಾಗ ಇದು 2017ರ ವಿಡಿಯೋ ಎಂಬುದು ಗೊತ್ತಾಗಿದೆ. ಅದನ್ನೇ ಈಗ ಮತ್ತೆ ಪೋಸ್ಟ್‌ ಮಾಡಲಾಗಿದೆ. 2017ರಲ್ಲಿ ಕೇಂದ್ರ ಸರ್ಕಾರ ಎಫ್‌ಆರ್‌ಡಿಐ ಮಸೂದೆ ಮಂಡಿಸಿತ್ತು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ನಂತರ ಅದನ್ನು ಹಿಂಪಡೆದಿದೆ. ಈಗ ಅದನ್ನು ಮತ್ತೆ ಮಂಡಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ. ಇವ್ಯಾವುದನ್ನೂ ಹೇಳದೆ ಹಳೆಯ ವಿಡಿಯೋವನ್ನೇ ಮತ್ತೆ ಅಪ್‌ಲೋಡ್‌ ಮಾಡಲಾಗಿದೆ. ಹಾಗಾಗಿ ಇದೊಂದು ಸುಳ್ಳು ಮಾಹಿತಿಯ ವಿಡಿಯೋ.

- ವೈರಲ್ ಚೆಕ್