ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಲೈಂಗಿಕ ಹಗರಣಗಳ ಬಗ್ಗೆ ಸಾಕಷ್ಟುಸುದ್ದಿಗಳು ಹರಿದಾಡಿವೆ. ಅವರು ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾಗ ಇಂತಹ ಸಾಕಷ್ಟುಸುದ್ದಿಗಳು ಬೆಳಕಿಗೆ ಬಂದಿದ್ದವು. ನಂತರ ಅಂತಹ ಸುದ್ದಿಗಳು ನಿಂತಿದ್ದವು. ಹೀಗಿರುವಾಗ ಇತ್ತೀಚೆಗೆ ಅವರು ಸಾರ್ವಜನಿಕ ಸ್ಥಳದಲ್ಲಿ ಬಿಕಿನಿ ತೊಟ್ಟಯುವತಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ವಿಡಿಯೋವೊಂದು ವೈರಲ್‌ ಆಗಿದೆ.

ಮೇರಜ್‌ ಎಂಬ ಟ್ವೀಟರ್‌ ಖಾತೆಯಿಂದ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ‘ಟ್ರಂಪ್‌’ ಅವರು ಬಿಕಿನಿ ಧರಿಸಿದ ಯುವತಿಯರ ಗುಪ್ತಾಂಗವನ್ನು ಬೇಕಂತಲೇ ಸ್ಪರ್ಶಿಸುತ್ತ ಫೋಟೋಗಳಿಗೆ ಪೋಸ್‌ ನೀಡುತ್ತಾರೆ! ‘ಭಕ್ತರೇ, ನಿಮ್ಮ ಚಿಕ್ಕಪ್ಪ ಏನು ಮಾಡುತ್ತಿದ್ದಾರೆ ನೋಡಿ’ ಎಂದು ಮೇರಜ್‌ ಅವರು ಹಿಂದಿಯಲ್ಲಿ ಬರೆದಿದ್ದಾರೆ. ಈ ಬರಹ ಇಲ್ಲದ ವಿಡಿಯೋ ಕೂಡ ಸಾಕಷ್ಟುವೈರಲ್‌ ಆಗಿದ್ದು, ಅಮೆರಿಕದಂತಹ ದೇಶದ ಅಧ್ಯಕ್ಷರಾದ ಮೇಲೂ ಟ್ರಂಪ್‌ ತಮ್ಮ ಹುಚ್ಚಾಟ ನಿಲ್ಲಿಸಿಲ್ಲ ಎಂದು ಸಾಕಷ್ಟುಕಮೆಂಟ್‌ಗಳು ಬಂದಿವೆ.

Fact Check: ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

ಆದರೆ, ಇದರ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಟ್ರಂಪ್‌ ಅವರ ಇಂಪರ್ಸನೇಟರ್‌ (ಅದೇ ರೀತಿ ಕಾಣುವ ವ್ಯಕ್ತಿ) ಡೆನಿಸ್‌ ಅಲನ್‌ ಎಂಬಾತ ಇತ್ತೀಚೆಗೆ ಟ್ರಂಪ್‌ ಬ್ರಿಟನ್ನಿಗೆ ಭೇಟಿ ನೀಡುವುದನ್ನು ವಿರೋಧಿಸಿ ನಡೆಸಿದ ವಿನೂತನ ಪ್ರತಿಭಟನೆಯ ವಿಡಿಯೋ ಎಂದು ತಿಳಿದುಬಂದಿದೆ. ಈತ ಥೇಟ್‌ ಟ್ರಂಪ್‌ರಂತೆಯೇ ಕಾಣುತ್ತಾನೆ ಮತ್ತು 2016ರಿಂದಲೂ ಇಂತಹ ಪ್ರತಿಭಟನೆ ನಡೆಸುತ್ತಾ ಬಂದಿದ್ದಾನೆ. ಅವನನ್ನೇ ಟ್ರಂಪ್‌ ಎಂದು ನಂಬಿ ಹಲವಾರು ವಿಡಿಯೋಗಳನ್ನು ಜನರು ಹಂಚುತ್ತಿದ್ದಾರೆ.