ಗಾಂಧೀಜಿ 150 ನೇ ಜಯಂತಿ ಬೆನ್ನಲ್ಲೇ ಮಹಾತ್ಮ ಗಾಂಧಿ ಮಹಿಳೆಯೊಬ್ಬರೊಟ್ಟಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಜಯ್ ಗುಪ್ತಾ ಎಂಬ ಹೆಸರಿನ ಟ್ವೀಟರ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿ, ‘ಚಮಚಾಗಳೇ...ನಿಮ್ಮ ರಾಷ್ಟ್ರಪಿತ ಮಾಡುತ್ತಿರುವುದೇನು?’ ಎಂದು ಒಕ್ಕಣೆ ಬರೆಯಲಾಗಿದೆ. ಹಲವಾರು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ.

Fact Check: ಮೋದಿ ಸರ್ಕಾರದಿಮದ ನಿಮ್ಮ ಖಾತೆಯಲ್ಲಿರುವ ಹಣ ಜಪ್ತಿ?

ಆದರೆ ಈ ಫೋಟೋದ ಸತ್ಯಾಸತ್ಯ ಏನೆಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ನ್ಯೂಸ್ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಇದರ ಜಾಡು ಹಿಡಿದು ಪರಿಶೀಲಿಸಿದಾಗ ಇದು ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ ಎಂಬುದು ಸ್ಪಷ್ಟವಾಗಿದೆ. ಮೂಲ ಚಿತ್ರದಲ್ಲಿ ಗಾಂಧಿ ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರೊಟ್ಟಿಗೆ ಕುಳಿತು ಕುಶಲೋಪರಿ ವಿಚಾರಿಸುತ್ತಿರುವ ದೃಶ್ಯವಿದೆ.

Fact Check: ಬಿಕಿನಿ ಯುವತಿಯರ ಜೊತೆ ಟ್ರಂಪ್ ಅಸಭ್ಯವಾಗಿ ವರ್ತಿಸಿದ್ರಾ?

1946 ಜುಲೈ 6 ರಂದು ಅಸೋಸಿಯೇಟ್ ಪ್ರೆಸ್ ಈ ಫೋಟೋವನ್ನು ಪ್ರಕಟಿಸಿತ್ತು. ಅದರಲ್ಲಿ ಬಾಂಬೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಎಂದು ವಿವರಣೆ ಇದೆ. ಇದೇ ಫೋಟೋವನ್ನು ಬಳಸಿಕೊಂಡು ಗಾಂಧಿ ಎದುರಿಗೆ ಹುಡುಗಿಯೊಬ್ಬಳು ಇರುವಂತೆ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಎಡಿಟ್ ಮಾಡಿರುವ ಚಿತ್ರ 2013 ರಿಂದಲೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

- ವೈರಲ್ ಚೆಕ್