Asianet Suvarna News Asianet Suvarna News

ಫೇಸ್'ಬುಕ್ ವಿಶ್ವಕ್ಕೆ ನಾವೇ ನಂ 1

ಜಗತ್ತಿನೆಲ್ಲಡೆ ಪ್ರತಿ ತಿಂಗಳು 200 ಕೋಟಿ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ ಕಳೆದ 6 ತಿಂಗಳಿನಲ್ಲಿ 5 ಕೋಟಿಗೂ ಅಧಿಕ ಏರಿಕೆಯಾಗಿದೆ.

Facebook india number 1 position
  • Facebook
  • Twitter
  • Whatsapp

ವಾಷಿಂಗ್ಟನ್(ಜು.15): ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 24 ಕೋಟಿ ದಾಟಿದೆ. ಈ ಮೂಲಕ ವಿಶ್ವದಲ್ಲಿಯೇ ಅತಿ ಹೆಚ್ಚು ಫೇಸ್‌ಬಕ್ ವೀಕ್ಷಕರನ್ನು ಹೊಂದಿರುವ ದೇಶ ಎನಿಸಿಕೊಂಡಿದೆ. ಅಮೆರಿಕದಲ್ಲಿರುವ 24 ಕೋಟಿ ಫೇಸ್‌ಬುಕ್ ಬಳಕೆದಾರರಿಗೆ ಹೋಲಿಸಿದರೆ ಭಾರತದಲ್ಲಿ ಜು.13ರ ವರೆಗೆ 24.1 ಕೋಟಿ ಫೇಸ್‌ಬುಕ್ ಬಳಕೆದಾರರಿದ್ದಾರೆ.

ಜಗತ್ತಿನೆಲ್ಲಡೆ ಪ್ರತಿ ತಿಂಗಳು 200 ಕೋಟಿ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ ಕಳೆದ 6 ತಿಂಗಳಿನಲ್ಲಿ 5 ಕೋಟಿಗೂ ಅಧಿಕ ಏರಿಕೆಯಾಗಿದೆ. ಅದೇ ಅಮೆರಿಕದಲ್ಲಿ ಬಳಕೆದಾರರು 2.6 ಕೋಟಿ ಏರಿಕೆಯಾಗಿದ್ದಾರೆ.

Follow Us:
Download App:
  • android
  • ios