Asianet Suvarna News Asianet Suvarna News

ಖಗ್ರಾಸ ಗ್ರಹಣ: ರಾಜ್ಯದ ಎಲ್ಲ ದೇವಾಲಯಗಳ ದರ್ಶನ ಮಾಹಿತಿ

ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳಿಗೆ ದರ್ಶನ ಬಂದ್ ಮಾಡಲಾಗಿದೆ. ಗ್ರಹಣದ ಆರಂಭಿಕ ಕಾಲ ಅಂತ್ಯ ಕಾಲ ಎಲ್ಲವನ್ನು ತಿಳಿದುಕೊಳ್ಳಬೇಕಾಗುತ್ತದೆ.

Extra long lunar eclipse: No Pooja i n chamundeshwari temple mysore
Author
Bengaluru, First Published Jul 26, 2018, 4:30 PM IST

ಬೆಂಗಳೂರು/ತುಮಕೂರು/ಮೈಸೂರು[ಜು.26]  ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ‌ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇವಾಲಯಕ್ಕೆ ನಾಳೆ ದರ್ಶನ ಇರುವುದಿಲ್ಲ.  ನಾಳೆ ಮಧ್ಯಾಹ್ನ 12.30 ರಿಂದ ಬಾಗಿಲು ಮುಚ್ಚಲಿದೆ. ನಂತರ ಶನಿವಾರ ಮುಂಜಾನೆ 8 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಗ್ರಹಣ ದೋಷ ಹಿನ್ನೆಲೆ ಶನಿವಾರ ಮುಂಜಾನೆ ದೇವಾಲಯ ಸ್ವಚ್ಛ ಮಾಡಿ ನಂತರ ಭಕ್ತರಿಗೆ ಮಹಾಲಕ್ಷ್ಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. 

ಭಕ್ತರ ಗಮನಕ್ಕೆ : ಉಡುಪಿ, ಕುಕ್ಕೆಯಲ್ಲಿ ದೇವರ ದರ್ಶನ ಸ್ಥಗಿತ

ಚಾಮುಂಡಿ ಬೆಟ್ಟವೂ ಬಂದ್: ಎರಡನೇ ಆಷಾಢ ಶುಕ್ರವಾರವಿದ್ರೂ ರಾತ್ರಿ 9 ಗಂಟೆಗೆ ಚಾಮುಂಡೇಶ್ವರಿ ದೇವಾಲಯ ಬಂದ್ ಮಾಡಲಾಗುತ್ತದೆ. ಗ್ರಹಣದ ನಿಮಿತ್ತ ದೇವಾಲಯ 2 ಗಂಟೆ ಮುಂಚಿತವಾಗಿ ದರ್ಶನ ಸ್ಥಗಿತ ಮಾಡಲಾಗುತ್ತಿದೆ. ಆಷಾಢ ಶುಕ್ರವಾರದಲ್ಲಿ ಲಕ್ಷಾಂತರ ಭಕ್ತರ ಆಗಮನ ಹಿನ್ನೆಲೆ ಭಕ್ತರ ಸುಲಲಿತ ಓಡಾಟಕ್ಕಾಗಿ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.  ಭಕ್ತರು ಬೆಟ್ಟಕ್ಕೆ ತೆರಳಲು
ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು  ರಾತ್ರಿ 9 ಗಂಟೆಯೊಳಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿದೆ.

ಸುದೀರ್ಘ ಚಂದ್ರಗ್ರಹಣ: ಏನು? ಎತ್ತ? ಸಮಯ-ಸಂದರ್ಭ?

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ: ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ  ರಕ್ತ ಚಂದ್ರಗ್ರಹಣ/ಕೇತುಗ್ರಸ್ಥ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ರಾತ್ರಿಯಿಡೀ  ತೆರೆದಿರುತ್ತದೆ.  ಅನಾದಿ ಕಾಲದಿಂದಲೂ ಗ್ರಹಣ ಸಂದರ್ಭದಲ್ಲಿ ಕೊಲ್ಲೂರು ದೇವಳ ತೆರೆದೇ ಇರುತ್ತದೆ. ಭಕ್ತಾಭಿಮಾನಿಗಳಿಗೆ ಜಪ ಮಾಡಲು ಅವಕಾಶವಿರಲಿದೆ. ಮಾಮೂಲಿಯಂತೆ ಮಧ್ಯಾಹ್ನ, ರಾತ್ರಿ ಪೂಜೆ ನಡೆಯುತ್ತದೆ. 3.47 ಗ್ರಹಣ ಬಿಟ್ಟ ನಂತರ ದೇವಿಗೆ ವಿಶೇಷ ಮಹಾಪೂಜೆ ಆಗುತ್ತದೆ. ‌ಮಧ್ಯಾಹ್ನ ಊಟ ಇರುತ್ತದೆ ಸಂಜೆ 6 ರಿಂದ 8 ಗಂಟೆಯವರೆಗೆ ರಾತ್ರಿ ಊಟ ವಿತರಿಸಲಾಗುತ್ತದೆ.

ಉಡುಪಿ ಶ್ರೀ ಕೃಷ್ಣಮಠ: ಗ್ರಹಣವಿದ್ದರೂ  ಕೃಷ್ಣಮಠ ತೆರೆದಿರುತ್ತದೆ ಗ್ರಹಣ ಆರಂಭವಾದ ಕೂಡಲೇ ಗ್ರಹಣ ಶಾಂತಿ ಹೋಮ‌ ಆರಂಭವಾಗುತ್ತದೆ ದೈನಂದಿನಂತೆ ಬೆಳಗ್ಗೆ, ಮಧ್ಯಾಹ್ನ ಪೂಜೆ  ಇರುತ್ತದೆ. ರಾತ್ರಿ ಪೂಜೆ 7.30 ಕ್ಕೆ.ಮಧ್ಯಾಹ್ನ ಊಟ ಇರಲಿದೆ. ರಾತ್ರಿ ಊಟವಿಲ್ಲ

ಗ್ರಹಣ ಬಿಟ್ಟ ಸಂದರ್ಭದಲ್ಲಿ ಹೋಮಕ್ಕೆ ಪರ್ಯಾಯ ಶ್ರೀಗಳಿಂದ ಪೂರ್ಣಾಹುತಿ ನಡೆಯುತ್ತದೆ. ಕೃಷ್ಣಾರ್ಪಣ ಬಿಡಲಾಗುತ್ತದೆ. ಪರ್ಯಾಯ ಪಲಿಮಾರು ಶ್ರೀ ಹಾಗೂ ಕೆಲವು ಭಕ್ತರು 24 ಗಂಟೆ ಉಪವಾಸ ಮಾಡುತ್ತಾರೆ.

ಕುಕ್ಕೆಯಲ್ಲಿ ಸಮಯ ಬದಲಾವಣೆ: ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಜು.27ರ ರಾತ್ರಿ 7 ಗಂಟೆ ನಂತರ ದೇವರ ದರ್ಶನ ಬಂದ್. ರಾತ್ರಿ 11.50 ರಿಂದ ಗ್ರಹಣ ಬಿಡುವ ತಡರಾತ್ರಿ 3 ಗಂಟೆವರೆಗೂ ದರ್ಶನಕ್ಕೆ ಅವಕಾಶವಿರುತ್ತದೆ. 

ನಾಳೆ ಸಂಜೆ 6.30ಕ್ಕೆ ನಡೆಯಲಿರುವ ರಾತ್ರಿಯ ಮಹಾಪೂಜೆ ಬೆಳೆಗ್ಗೆ ಮತ್ತು ಮಧ್ಯಾಹ್ನದ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಜೆಯ ಆಶ್ಲೇಷ ಬಲಿ ಪೂಜೆ ಮತ್ತು ರಾತ್ರಿಯ ಭೋಜನ ಪ್ರಸಾದವೂ ರದ್ದು. ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ. ಜು.28ರ ಬೆಳಿಗ್ಗೆ ಎಂದಿನಂತೆ ದೇವರ ದರ್ಶನ ಮತ್ತು ಪೂಜೆಗಳು ಆರಂಭವಾಗಲಿದೆ.

ಧರ್ಮಸ್ಥಳದಲ್ಲಿ ರಾತ್ರಿ ಊಟ ಸಮಯದಲ್ಲಿ ಬದಲಾವಣೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜಾದಿಗಳು ಯಥಾಸ್ಥಿತಿ ನಡೆಯುತ್ತದೆ. ದರ್ಶನ ಸಮಯ ಮತ್ತು ಪೂಜೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ನಾಳೆ ಬೆಳಿಗ್ಗೆಯಿಂದ ರಾತ್ರಿ 8.30ರವರೆಗೆ ದರ್ಶನಕ್ಕೆ ಅವಕಾಶವಿರಲಿದೆ. ರಾತ್ರಿ 10.30ರ ಬದಲು 8.30ಕ್ಕೆ ಭೋಜನ ಸ್ಥಗಿತಗೊಳ್ಳುತ್ತದೆ. 

ಇಡಗುಂಜಿ ಪೂಜಾ ಸಮಯ ಬದಲಾವಣೆ: ಉತ್ತರಕನ್ನಡದ ಇಡಗುಂಜಿ ಕ್ಷೇತ್ರದಲ್ಲಿ ಪೂಜಾ ಸಮಯದಲ್ಲಿ ಬದಲಾವಣೆ.  ನಾಳೆ ಮಧ್ಯಾಹ್ನ 12-30ಕ್ಕೆ ಮಹಾ ಪೂಜೆ, 7 ಗಂಟೆಗೆ ಮಹಾ ಪೂಜೆ ಬಳಿಕ ರಾತ್ರಿಯೂ ದೇವಸ್ಥಾನ ತೆರೆದಿರುತ್ತದೆ. ಗ್ರಹಣ ಸಮಯದಲ್ಲಿ ಇಡಗುಂಜಿ ಮಹಾಗಣಪತಿಗೆ ಅಭಿಷೇಕ ನಡೆಯಲಿದೆ. 

ಶೃಂಗೇರಿ-ಹೊರನಾಡಿನಲ್ಲಿ ದರ್ಶನ ಭಾಗ್ಯ ನಾಳೆ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭಕ್ತರಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರಾದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಎಂದಿನಂತೆ ರಾತ್ರಿ 8.30ಕ್ಕೆ ಶೃಂಗೇರಿಯಲ್ಲಿ, ರಾತ್ರಿ 9ಕ್ಕೆ ಹೊರನಾಡಿನಲ್ಲಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತದೆ.

ನಂಜನಗೂಡಿನಲ್ಲಿ ದರ್ಶನ ಅಭಾದಿತ: ದಕ್ಷಿಣ ಕಾಶಿಯಲ್ಲಿ ಶ್ರೀಕಂಠೇಶ್ವರನ ದರ್ಶನದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಬೆಳಗ್ಗೆ 7  ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಸಾರ್ವಜನಿಕ ದರ್ಶನ ಇರುತ್ತದೆ. 

ಗೋಕರ್ಣ: ಗೋಕರ್ಣದಲ್ಲಿ ಮಧ್ಯಾಹ್ನ ಎಂದಿನಂತೆ ಮಹಾ ಪೂಜೆ  ನಡೆಯಲಿದೆ. ರಾತ್ರಿ 11.54ರಿಂದ ಗ್ರಹಣ ಬಿಡುವ ತಡರಾತ್ರಿ 3-49ರವರೆಗೂ  ದರ್ಶನಕ್ಕೆ ಅವಕಾಶವಿಲಿದೆ. 

ನೆಹರೂ ಪ್ಲಾನಿಟೋರಿಯಂನಲ್ಲಿ ಸಕಲ ಸಿದ್ಧತೆ:  11:54 ಕ್ಕೆ ಚಂದ್ರಗ್ರಹಣ ಆರಂಭವಾಗುತ್ತೆ-1:43 ಕ್ಕೆ ಚಂದ್ರ ಗ್ರಹಣ ಸಂಪೂರ್ಣ ಗೋಚರವಾಗುತ್ತೆ- 3.48 ಕ್ಕೆ ಸಂಪೂರ್ಣವಾಗಿ ಗ್ರಹಣ ಅಂತ್ಯವಾಗಲಿದೆ- ನಾಳೆ ಮಂಗಳ ಗ್ರಹ ಕೂಡಾ ಪ್ರಕಾಶಮಾನವಾಗಲಿದೆ- ಇದು ಈ ಬಾರಿಯ ವಿಶೇಷ, ಚಂದ್ರ ಹಾಗೂ ಮಂಗಳನನ್ನು ಒಟ್ಟಿಗೆ ನೋಡಬಹುದು. ನಾಳಿನ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು-ತಾರಾಲಯದಲ್ಲಿ 4 ಟೆಲಿಸ್ಕೋಪ್ ಹಾಗೂ 2 ಬೈನಾಕುಲರ್ ಇಡಲಾಗುವುದು- ನೆಹರೂ ತಾರಾಲಯಕ್ಕೆ ಬರುವವರ  ಜನರ ಸಂಖ್ಯೆ  ಹೆಚ್ಚಾದರೆ ಮತ್ತಷ್ಟು ಟೆಲಿಸ್ಕೋಪ್ ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ನೆಹರೂ ತಾರಾಲಯ ನಿರ್ದೇಶಕ ಪ್ರಮೋದ್ ಗಲಗಲಿ ತಿಳಿಸಿದ್ದಾರೆ.

 

Follow Us:
Download App:
  • android
  • ios