ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿ 3 ವರ್ಷದ ಗರಿಷ್ಠ ತಲುಪುತ್ತಿವೆ. ಈ ಸಂದರ್ಭದಲ್ಲಿ ಗುರುವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಾಡಿದ ಘೋಷಣೆಯೊಂದು ತತ್ಕಾಲಕ್ಕೆ ‘ದರ ಇಳಿಕೆ’ಯ ಆಶಾಕಿಣ ಮೂಡಿಸಿತಾದರೂ ಕೊನೆಗೆ ಇದರಿಂದ ನಯಾಪೈಸೆ ಕೂಡ ದರ ಇಳಿಯದು ಎಂದು ಸಾಬೀತಾಯಿತು.

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿ 3 ವರ್ಷದ ಗರಿಷ್ಠ ತಲುಪುತ್ತಿವೆ. ಈ ಸಂದರ್ಭದಲ್ಲಿ ಗುರುವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಾಡಿದ ಘೋಷಣೆಯೊಂದು ತತ್ಕಾಲಕ್ಕೆ ‘ದರ ಇಳಿಕೆ’ಯ ಆಶಾಕಿಣ ಮೂಡಿಸಿತಾದರೂ ಕೊನೆಗೆ ಇದರಿಂದ ನಯಾಪೈಸೆ ಕೂಡ ದರ ಇಳಿಯದು ಎಂದು ಸಾಬೀತಾಯಿತು.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕವನ್ನು ಲೀಟರ್‌ಗೆ 2 ರು. ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು 6 ರುಪಾಯಿ ಇಳಿಸುವುದಾಗಿ ಜೇಟ್ಲಿ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದರು.

ಆದರೆ ಹೊಸದಾಗಿ 8 ರುಪಾಯಿಯಷ್ಟು ‘ರಸ್ತೆ ಹಾಗೂ ಮೂಲಸೌಕರ್ಯ ಸೆಸ್’ ವಿಧಿಸುವುದಾಗಿ ಘೋಷಿಸಿದರು. ಇದರಿಂದಾಗಿ ಜೇಟ್ಲಿ ಅವರು ಒಂದು ಕೈಲಿ ಕೊಟ್ಟಂಗೆ ಮಾಡಿ ಇನ್ನೊಂದು ಕೈಲಿ ಕಿತ್ತುಕೊಂಡಿದ್ದು ಸಾಬೀತಾಯಿತು. ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 70 ಡಾಲರ್ ಆಗಿರುವ ಕಾರಣ ಪೆಟ್ರೋಲ್, ಡೀಸೆಲ್ ದರಗಳು ಭಾರಿ ಪ್ರಮಾಣದಲ್ಲಿ ಕಳೆದ 1-2 ತಿಂಗಳಲ್ಲಿ ಏರಿವೆ. ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ಲೀಟರ್ ಗೆ 75 ರು. ದಾಟಿ 80ರ ಗಡಿ ಸಮೀಪಿಸುತ್ತಿದೆ.